ಅನೌಪಚಾರಿಕ ಭೇಟಿ : ದೆಹಲಿ ವಿವಿಯಿಂದ ರಾಹುಲ್‌ ಗಾಂಧಿಗೆ ನೋಟಿಸ್

ದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳ ಜೊತೆ ಭೋಜನ ಸವಿದು, ಕೆಲವೊಂದಿಷ್ಟು ಹೊತ್ತು ಸಮಾಲೋಚನೆ ನಡೆಸಿದ್ದಾರೆ. ಈ ವಿಚಾರ ಬಹಳ ಚರ್ಚೆಯಲ್ಲಿದ್ದು, ರಾಹುಲ್ ಗಾಂಧಿಗೆ ವಿಶ್ವವಿದ್ಯಾಲಯವು ನೊಟೀಸ್ ಜಾರಿ ಮಾಡಿದೆ.

ಝಡ್ – ಪ್ಸಸ್ ಭದ್ರತೆ ಹೊಂದಿರುವ ರಾಷ್ಟ್ರೀಯ ಪಕ್ಷದ ನಾಯಕ ರಾಹುಲ್‌ ಗಾಂಧಿಯವರ ಈ ನಡವಳಿಕೆ, ಅವರ ಘನತೆಗೆ ಶೋಭೆ ತರುವಂತದ್ದಲ್ಲ. ಈ ರೀತಿ ಅತಿಕ್ರಮಣ ಪ್ರವೇಶ, ಶುದ್ಧ ಬೇಜವಾಬ್ದಾರಿ ನಡೆಯನ್ನು ನಾವು ಸಹಿಸುವುದಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೂ ಇದು ಅಪಾಯಕಾರಿಯಾಗಿದೆ. ಮುಂಬರುವ ದಿನಗಳನ್ನು ಇಂತಹ ವರ್ತನೆಯನ್ನು ಪುನಾರಾವರ್ತಿಸಬಾರದು ಎಂದು ಎಚ್ಚರಿಕೆ ನೀಡಿ, ನೊಟೀಸ್ ನೀಡಿದೆ.

ಹಾಸ್ಟೆಲ್ ಆಡಳಿತ ಮಂಡಳಿ ನಿಯಮದ ಪ್ರಕಾರ, ಅನುಮತಿ ಇಲ್ಲದೇ, ಪ್ರೊಸಿಜರ್ ಇಲ್ಲದೇ ಹೊರಗಿನವರನ್ನು ಆವರಣದೊಳಗೆ ಬಿಡಲಾಗುವುದಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವು ಈ ನಿಯಮವನ್ನು ಪಾಲಿಸುತ್ತೇವೆ. ನಮಗೆ ಮುಂಚೆಯೇ ತಿಳಿಸದೇ, ಯಾವುದೇ ಭದ್ರತೆ ಇಲ್ಲದೇ ಈ ರೀತಿ ಬರುವುದು ಅವರ ಭದ್ರತಾ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ವಿವಿ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.

















































error: Content is protected !!
Scroll to Top