ಸ್ವ- ಸಹಾಯ ಸಂಘದ ಸಾಲ ಪಾವತಿ ವಿಚಾರ ದಂಪತಿ ಮಧ್ಯೆ ಚರ್ಚೆ – ಪತ್ನಿ ಆತ್ಮಹತ್ಯೆ

ಕಾರ್ಕಳ : ಸ್ವ – ಸಹಾಯ ಸಂಘದ ಸಾಲ ಕಟ್ಟುವ ವಿಚಾರವಾಗಿ ದಂಪತಿ ಮಧ್ಯೆ ಚರ್ಚೆ ನಡೆದು ಕೊನೆಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ನಗರದ ಪತ್ತೊಂಜಿಕಟ್ಟೆಯಲ್ಲಿ ಸಂಭವಿಸಿದೆ. ಪುಷ್ಪ (23 ) ಎಂಬುವರೇ ನೇಣಿಗೆ ಶರಣಾದ ಮಹಿಳೆ.
ಮೇ 6 ರ ಸಂಜೆ ಪುಷ್ಪ ಮತ್ತು ಅವಳ ಗಂಡ ಅಣ್ಣಪ್ಪ ನಡುವೆ ಸ್ವಸಹಾಯ ಸಂಘದ ಸಾಲ ಕಟ್ಟುವ ವಿಚಾರದ ಬಗ್ಗೆ ಮಾತಿಗೆ ಮಾತು ಬೆಳೆದು ಜಗಳಕ್ಕೆ ಕಾರಣವಾಗಿತ್ತು. ಅಂದು ರಾತ್ರಿ 2 ಗಂಟೆಗೆ ಪುಷ್ಪಳ ತಾಯಿ ಬೇಬಿ ನೀರು ಕುಡಿಯಲೆಂದು ಅಡುಗೆ ಕೋಣೆಗೆ ಹೋದಾಗ ಅಡುಗೆ ಕೋಣೆ ಹತ್ತಿರ ಇರುವ ಪುಷ್ಪಳ ರೂಮಿನಲ್ಲಿ ಕಾಲು ನೇತಾಡುತ್ತಿರುವುದು ಕಂಡುಬಂದಿದೆ. ಗಾಬರಿಗೊಂಡ ಬೇಬಿಯವರು ಬೊಬ್ಬೆ ಹಾಕಿದ್ದು ಎಚ್ಚರಗೊಂಡ ಅಣ್ಣಪ್ಪ ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಆದರೆ, ಈ ವೇಳೆಗಾಗಲೇ ಪುಷ್ಪ ಸಾವಿನಪ್ಪಿರುತ್ತಾರೆ.

ಬೇಬಿ ಅವರ ಪುತ್ರಿ ಪುಷ್ಪ ಅವರಿಗೆ 2017ರಲ್ಲಿ ಅಣ್ಣಪ್ಪ ಅವರೊಂದಿಗೆ ಮದುವೆಯಾಗಿತ್ತು. ಮದುವೆಯಾಗಿ 6 ವರ್ಷವಾಗಿದ್ದು, ನಾಲ್ಕೂವರೆ ವರ್ಷದ ಗಂಡು ಮಗು ಇದೆ. ಪುಷ್ಪ ಗೇರು ಬೀಜ ಸಿಪ್ಪೆ ತೆಗೆಯುವ ಕೆಲಸ ಮಾಡಿಕೊಂಡಿದ್ದು ಅಣ್ಣಪ್ಪ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ಮೆ 6ರಂದು ಸಂಜೆ ಪುಷ್ಪ ಮತ್ತು ಅವಳ ಗಂಡ ಅಣ್ಣಪ್ಪನಿಗೆ ಸ್ವಸಹಾಯ ಸಂಘದ ಸಾಲ ಕಟ್ಟುವ ಬಗ್ಗೆ ಚರ್ಚೆಯಾಗಿದ್ದು ಮೆ 7ರಂದು ಬೆಳಿಗ್ಗೆ 6 ಗಂಟೆಗೆ ಹಣದ ವ್ಯವಸ್ಥೆ ಮಾಡುತ್ತೇನೆಂದು ಅಣ್ಣಪ್ಪ ಹೇಳಿರುತ್ತಾರೆ. ಆದರೂ ಪುಷ್ಪ ಈಗಲೇ ಹಣ ಬೇಕೆಂದು ಹೇಳಿ ಪಟ್ಟು ಹಿಡಿದಿದ್ದರು ಕಾರ್ಕಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಬೇಬಿ ತಿಳಿಸಿದ್ದಾರೆ.





























































































error: Content is protected !!
Scroll to Top