ಎಸ್‌ಎಸ್‌ಎಲ್‌ಸಿ ಫಲಿತಾಂಶ : ಶೇ. 83.89 ವಿದ್ಯಾರ್ಥಿಗಳು ತೇರ್ಗಡೆ

ನಾಲ್ವರು ವಿದ್ಯಾರ್ಥಿಗಳಿಗೆ ಶೇ. 100 ಅಂಕ

ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ, ಹಾಸನ ತೃತೀಯ ಸ್ಥಾನ

ಬೆಂಗಳೂರು : ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು ಶೇ.83.89 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಬಾಲಕಿಯರದ್ದೇ ಮೇಲ್ಗೈ. 3,59,511 ಬಾಲಕಿಯರು ತೇರ್ಗಡೆ. 3,41,101 ಬಾಲಕರು ತೇರ್ಗಡೆಯಾಗಿದ್ದಾರೆ. 61,003 ವಿದ್ಯಾರ್ಥಿಗಳಿಗೆ ಎ ಗ್ರೇಡ್‌ ಸಿಕ್ಕಿದೆ. 23 ಜಿಲ್ಲೆಗಳು ಎ ಗ್ರೇಡ್‌ ಫಲಿತಾಂಶ ಪಡೆದುಕೊಂಡಿವೆ. ನಾಲ್ವರು ವಿದ್ಯಾರ್ಥಿಗಳೀಗೆ 625ರಲ್ಲಿ 625 ಅಂಕ ಲಭಿಸಿದೆ. ಒಟ್ಟು 7 ಲಕ್ಷ 619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ಚಿತ್ರದುರ್ಗ ಪ್ರಥಮ (ಶೇ. 96.80), ಮಂಡ್ಯ ದ್ವಿತೀಯ (ಶೇ.96.74) ಮತ್ತು ಹಾಸನ ಮೂರನೇ ಸ್ಥಾನ (ಶೇ.96.68) ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಕಳೆದ ಮಾರ್ಚ್ 31 ರಿಂದ ಫೆಬ್ರವರಿ 15 ರವರೆಗೂ ಪರೀಕ್ಷೆ ನಡೆದಿತ್ತು.ಬೆಂಗಳೂರಿನ ಭೂಮಿಕಾ ಪೈ, ಚಿಕ್ಕಾಬಳ್ಳಾಪುರ ಯಶಸ್‌ ಗೌಡ, ಬೆಳಗಾವಿಯ ಅನುಪಮಾ ಶ್ರೀಶೈಲ, ವಿಜಯಪುರ ಭೀಮನ ಗೌಡ ಬಿರಾದಾರ್‌ ಪಾಟೀಲ್‌ ಶೇ.100 ಅಂಕ ಗಳಿಸಿರುವ ವಿದ್ಯಾರ್ಥಿಗಳು

















































error: Content is protected !!
Scroll to Top