ರಾಜ್ಯ ಸರಕಾರ ಬಜರಂಗದಳ ನಿಷೇಧಿಸುವ ಹಕ್ಕು ಹೊಂದಿಲ್ಲ – ಮೊಯ್ಲಿ ಸ್ಪಷ್ಟನೆ

ಉಡುಪಿ : ಈ ಹಿಂದೆ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗಲೂ ಭಜರಂಗದಳ ನಿಷೇಧಿಸುವ ಪ್ರಸ್ತಾವನೆ ಇರಲಿಲ್ಲ. ಇನ್ನು ರಾಜ್ಯ ಸರಕಾರ ಅಂತಹ ಸಂಘಟನೆಗಳನ್ನು ನಿಷೇಧಿಸುವ ಹಕ್ಕು ಹೊಂದಿಲ್ಲ ಎಂದು ಮೊಯ್ಲಿ ಸ್ಪಷ್ಟನೆ ನೀಡಿದ್ದಾರೆ. ಅವರು ಮೇ 3 ರಂದು ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದರು.

ವಲ್ಲಭಬಾಯಿ ಪಟೇಲ್ ಅವರನ್ನು ಈಗ ಬಿಜೆಪಿ ಆರಾಧಿಸುತ್ತದೆ. ಆದರೆ ಪಟೇಲ್ ಅವರು ಆರ್‌ಎಸ್‌ಎಸ್‌ನ್ನು ಬ್ಯಾನ್ ಮಾಡಿದ್ದರು. ಆದರೆ ಜವಾಹರಲಾಲ್ ನೆಹರೂ ಬ್ಯಾನ್ ವಾಪಾಸು ಪಡೆದರು. ಸುಪ್ರೀಂ ಕೋರ್ಟ್ ದ್ವೇಷ ರಾಜಕೀಯ ಕುರಿತು ಸ್ಪಷ್ಟ ತೀರ್ಪು ನೀಡಿದ್ದು. ಇದರ ಭಾಗವಾಗಿಯೇ ನಾವು ಪ್ರಸ್ತಾಪ ಮಾಡಿದ್ದೇವೆ ಎಂದು ಹೇಳಿದ್ದಾರೆ. ಬಜರಂಗದಳದಂತಹ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ. ಈ ಬಗ್ಗೆ ಇಂದು ನಮ್ಮ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಸ್ಪಷ್ಟಪಡಿಸುತ್ತಾರೆ ಎಂದು ತಿಳಿಸಿದ್ದಾರೆ.





































































error: Content is protected !!
Scroll to Top