ಕಾರ್ಕಳ : ಕಾರುಗಳ ಮಧ್ಯೆ ಡಿಕ್ಕಿಯಾದ ಪರಿಣಾಮ ಪ್ರಯಾಣಿಕರು ಗಾಯಗೊಂಡ ಘಟನೆ ನಲ್ಲೂರು ಗ್ರಾಮದ ಪರಪ್ಪಾಡಿಯಲ್ಲಿ ಮೇ 1 ರ ರಾತ್ರಿ ಸಂಭವಿಸಿದೆ. ಕಾರ್ಕಳ-ಧರ್ಮಸ್ಥಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಅಬ್ದುಲ್ ಜಲೀಲ್ ಎಂಬುವವರು ಸ್ವಿಫ್ಟ್ ಡಿಸೈರ್ (KA-19-D-0060 ) ಕಾರನ್ನು ಚಲಾಯಿಸಿಕೊಂಡು ಸಾಗುತ್ತಿದ್ದಾಗ ವಿಶ್ವಾಸ್ ಕಾಮತ್ ಎಂಬುವವರು ಹುಂಡೈ (KA-20-ME-0383) ಕಾರಿನಲ್ಲಿ ಹೊಸ್ಮಾರಿನಿಂದ ಬಜಗೋಳಿ ಕಡೆಗೆ ಸಾಗುತ್ತಿದ್ದು, ಅಬ್ದುಲ್ ಜಲೀಲ್ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಜಲೀಲ್ ಅವರ ಹೆಂಡತಿ ಮತ್ತು ಮಗ ಶಾಹಿಲ್ ಅಹಮ್ಮದ್ ಅವರಿಗೆ ಭುಜ ಮತ್ತು ಬೆನ್ನಿಗೆ ಗುದ್ದಿದ ನೋವು ಹಾಗೂ ವಿಶ್ವಾಸ್ ಕಾಮತ್ ಅವರ ಕಾರಿನಲ್ಲಿದ್ದವರಿಗೆ ಚಿಕ್ಕ ಪುಟ್ಟ ಗಾಯವಾಗಿರುತ್ತದೆ. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಶಾಹಿಲ್ ಅಹಮ್ಮದ್ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾರುಗಳ ಡಿಕ್ಕಿ : ಪ್ರಯಾಣಿಕರಿಗೆ ಗಾಯ





































