ಕಾರ್ಕಳ – ಹೆಬ್ರಿಯ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಕಾರ್ಕಳ : 220/10/15 ಕೆವಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಫೀಡರ್ ಗಳಾದ ನಿಟ್ಟೆ, ಕಲ್ಯಾ, ಲೆಮಿನಾ, ನಿಟ್ಟೆ ವಾಟರ್ ಸಪ್ಲೈ, 110/18ವಿ ಕಾರ್ಕಳ ಉಪಕೇಂದ್ರದಿಂದ ಹೊರಡುವ 11ಕೆವಿ ಪದವು ಫೀಡರ್‌ ಹಾಗೂ 110/11 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಫೀಡರ್‌ಗಳಾದ ಮುಂಡ್ಕೂರು, ನಂದಳಿಕೆ, ಬೋಳ ಮತ್ತು ಬೆಳ್ಮಣ್‌ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಮೇ 2 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ.
ಅಂದು ನಿಟ್ಟೆ, ನಿಟ್ಟೆ ಕಾಲೇಜು, ನಿಟ್ಟೆ ವಾಟರ್ ಸಪ್ಲೈ, ಬೊರ್ಗಲ್ ಗುಡ್ಡೆ, ಹಾಮಾಜೆ, ಕುಂಟಾಡಿ, ಕೈರಬೆಟ್ಟು, ನಿಟ್ಟೆ ಪಂಚಾಯತ್, ನಿಟ್ಟೆ ಮಸೀದಿ, ಲೆಮಿನಾ ಇಂಡಸ್ಟ್ರಿಸ್, ದೂಪದಕಟ್ಟೆ, ಕೆಮ್ಮಣ್ಣು, ಗುಂಡ್ಯಡ್ಕ, ಕಲ್ಲಂಬಾಡಿ, ಪದವು, ನೆಲ್ಲಿಗುಡ್ಡೆ, ಬಾರಾಡಿ, ಬೇಲಾಡಿ, ಕಾಂತಾವರ, ಕಲ್ಯಾ, ಬೆಳ್ಮಣ್, ಬೆಳ್ಮಣ್‌ ದೇವಸ್ಥಾನ, ಗೋಳಿಕಟ್ಟಿ, ನಂದಳಿಕೆ, ಜಂತ್ರ, ನೀಚಾಲು, ಕೆದಿಂಜೆ, ಅಂಬರಾಡಿ, ಬೋಳ ಪಂಚಾಯತ್, ಪಿಲಿಯೂರು, ಕೆರೆಕೋಡಿ, ಒಂಜಾರೆ ಕಟ್ಟೆ, ಬಾರೆಬೈಲು, ಪುಕ್ಕಲ್ಲು, ಕೆಂಪುಜೋರ, ಮಾವಿನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಕೊರಜೆ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ, ಮುಲ್ಲಡ್ಕ, ಕೋಡಿಮಾರು, ಸಂಕಲಕರಿಯ, ನಾನಿಲ್ ಹಾರ್, ಜಾರಿಗೆಕಟ್ಟೆ, ಪರಪ್ಪಾಡಿ, ಲೆಮಿನಾ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಮೇ 3 ರಂದು ಹೆಬ್ರಿಯ ವಿವಿಧೆಡೆ ವಿದ್ಯತ್‌ ಸ್ಥಗಿತ
ಮೇ 3 ರಂದು 33/11 ಕೆವಿ ಹೆಬ್ರಿ ಉಪವಿದ್ಯುತ್‌ ಸ್ಥಾವರದಿಂದ ಹೊರಡುವ 11ಕೆವಿ ಶಿವಪುರ, ಚಾರ, ಮುದ್ರಾಡಿ ಫೀಡರ್‌ನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗನಿರ್ವಹಣಾ ಕಾಮಗಾರಿ ನಡೆಯಲಿದ್ದು, ಅಂದು ಬೆಳಿಗ್ಗೆ 8.30 ರಿಂದ ಸಂಜೆ 5.30 ಗಂಟೆಯವರೆಗೆ ಚಾರ, ಹೊಸೂರು, ಶಿವಪುರ, ಕೆರೆಬೆಟ್ಟು, ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ, ಕನ್ಯಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಮೇ 5 ರಂದು ಬೈಲೂರಿನ ವಿವಿಧ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ
11ಕೆವಿ ಕಾರ್ಕಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಬೆಲೂರು ಎಕ್ಸ್‌ಪ್ರೆಸ್, ಕೆ.ಹೆಚ್.ಬಿ, ಪದವು ಮತ್ತು ನಕ್ರೆ ಫೀಡರ್‌ನಲ್ಲಿ ಮೇ 5 ರಂದು ಲೈನ್ ಸಿಪ್ಟಿಂಗ್‌ ಕಾಮಗಾರಿ ನಡೆಯಲಿರುವುದರಿಂದ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೈಲೂರು, ಜಾರ್ಕಳ, ನೀರೆ, ಎರ್ಲಪಾಡಿ, ಕೌಡೂರು, ಪರಪು, ಗುಂಡ್ಯಡ್ಕ, ಬೋರ್ಗಲ್ ಗುಡ್ಡೆ, ತುಂಬಾಡಿ, ಪಳ್ಳಿ, ಆನಂದಿ ಮೈದಾನ, ನಕ್ಷೆ, ಪೊಸನೊಟ್ಟು, ಕೆ.ಹೆಚ್.ಬಿ. ಕಾಲೋನಿ, ಜೋಡುರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.































































































error: Content is protected !!
Scroll to Top