ಬುನಾದಿ ಶಿಕ್ಷಣದಲ್ಲಿ ನಮ್ಮ ಧರ್ಮದ ಸಂಸ್ಕೃತಿ ಅಡಗಿದೆ – ಕಲ್ಲಡ್ಕ ಪ್ರಭಾಕರ್‌ ಭಟ್‌

ಹೆಬ್ರಿ : ಮೂರರಿಂದ ಎಂಟು ವರ್ಷದ ಮಕ್ಕಳಿಗೆ ನೀಡುವ ಶಿಶು ಶಿಕ್ಷಣವು ಅವರ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣವನ್ನು ಕಲ್ಪಿಸುವ ಸಮಗ್ರ ಶಿಕ್ಷಣವಾಗಿದೆ. ಈ ನಿಟ್ಟಿನಲ್ಲಿ ಎನ್‌ಇಪಿಯಲ್ಲಿ ಸೂಚಿಸಿದ ಬುನಾದಿ (ಶಿಶುವಾಟಿಕಾ) ಶಿಕ್ಷಣದಲ್ಲಿ ನಮ್ಮ ಧರ್ಮದ ಶ್ರೀಮಂತ ಪರಂಪರೆ, ಸಂಸ್ಕೃತಿ, ಸಂಸ್ಕಾರ ಅಡಿಗಿದೆ ಎಂದು ಕಲ್ಲಡ್ಕ ಪ್ರಭಾಕರ್‌ ಭಟ್‌ ಅಭಿಪ್ರಾಯಪಟ್ಟರು. ಅವರು ಏ. 23 ರಂದು ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವಿದ್ಯಾ ವಿಕಾಸ ಮತ್ತು ಶಿಶುವಾಟಿಕಾ ಆಚಾರ್ಯ ಪ್ರಶಿಕ್ಷಣ ಶಿಬಿರಕ್ಕೆ ಭೇಟಿ ನೀಡಿ ಮಾತನಾಡಿ, ಕಲ್ಲಿಗೆ ರೂಪ ನೀಡಿದರೆ ಅದು ಹೇಗೆ ಸುಂದರ ಶಿಲೆಯಾಗುತ್ತದೆಯೋ ಅಂತೆಯೇ ಎಳವೆಯಲ್ಲೇ ಸಂಸ್ಕಾರಯತ, ದೇಶ ಪ್ರೇಮಾಧಾರಿತ ಶಿಕ್ಷಣ ನೀಡಿದ್ದಲ್ಲಿ ಅವರು ಮುಂದೆ ಉತ್ತಮ ನಾಗರೀಕರಾಗಿ ರೂಪುಗೊಳ್ಳುತ್ತಾರೆ ಎಂದರು.

ಅಮೃತ ಭಾರತಿ ಟ್ರಸ್ಟ್‌ ಕಾರ್ಯದರ್ಶಿ ಗುರುದಾಸ ಶೆಣೈ ಅವರನ್ನು ಸ್ವಾಗತಿಸಿದರು. ವಿದ್ಯಾಭಾರತಿ ದಕ್ಷಿಣ ಮಧ್ಯೆ ಕ್ಷೇತ್ರದ ಶಿಶುವಾಟಿಕಾ ಸಹ ಪ್ರಮುಖ್ ತಾರ ಕೆ., ಸಹ ಸಂಘಟನಾ ಕಾರ್ಯದರ್ಶಿ ಜಿ.ಆರ್ ಜಗದೀಶ್, ಅಮೃತ ಭಾರತಿ ಸಂಸ್ಥೆಯ ಮಾತೃಭಾರತಿಯ ಅಧ್ಯಕ್ಷೆ ವೀಣಾ ಭಟ್ ವರಂಗ, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ, ಸಂಘಟನಾ ಕಾರ್ಯದರ್ಶಿ ಉಮೇಶ್ ಎಂ., ಪ್ರಚಾರ ಪ್ರಮುಖ್ ಮಹೇಶ್ ಹೈಕಾಡಿ, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಶಿಶುವಾಟಿಕಾ ಶಿಕ್ಷಣ ಪ್ರಮುಖ್ ಸ್ವರ್ಣ, ಸಂಸ್ಥೆಯ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್, ಅನಿತಾ ಕುಮಾರಿ, ಶಕುಂತಲಾ, ಅರುಣ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.





























































































error: Content is protected !!
Scroll to Top