ಬೈಕ್‌ಗೆ ಬೊಲೆರೊ ಡಿಕ್ಕಿ : ಸವಾರರಿಗೆ ಗಾಯ

ಕಾರ್ಕಳ: ಬೈಕಿಗೆ ಬೊಲೆರೊ ಟೆಂಪೊ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಏ. 17 ರಂದು ಮಿಯಾರು ಗ್ರಾಮದ ಬೋರ್ಕಟ್ಟೆ ಶಾಲೆಯ ಬಳಿ ಸಂಭವಿಸಿದೆ. ರೆಂಜಾಳ ಗ್ರಾಮದ ಆಶ್ರಯ್‌ ಜೈನ್‌ ಪ್ರಥಮ್‌ ಎಂಬವರ ಬೈಕಿನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿರುವಾಗ ಟೆಂಪೊ ಡಿಕ್ಕಿ ಹೊಡೆದಿದ್ದು, ಬೈಕ್‌ ಸಮೇತ ಸವಾರರು ರಸ್ತೆಗೆ ಬಿದ್ದಿದ್ದಾರೆ. ಪರಿಣಾಮವಾಗಿ ಆಶ್ರಯ್‌ ಕಾಲಿಗೆ ಗಾಯವಾಗಿದ್ದು, ಪ್ರಥಮ್‌ ಅವರ ಬಲಗಾಲಿನ ಮೂಳೆ ಮುರಿದಿದೆ ಹಾಗೂ ಎದೆಗೆ ಗಾಯವಾಗಿದೆ. ಟೆಂಪೋ ಚಾಲಕನೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







































































error: Content is protected !!
Scroll to Top