ಬಾಲಕಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಶಿಕ್ಷೆ

ಉಡುಪಿ ವಿಶೇಷ ಪೋಕ್ಸೊ ನ್ಯಾಯಾಲಯ ತೀರ್ಪು

ಉಡುಪಿ : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಉಡುಪಿಯ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಾಗರದ ಸಾಹಿಲ್‌ (23) ಶಿಕ್ಷೆಗೊಳಗಾಗಿರುವ ಅಪರಾಧಿ.
ಬೈಂದೂರಿನ ಬಾಲಕಿಯ ತಂದೆ ಸಾಗರದಲ್ಲಿ ಹೋಟೆಲ್‌ ಉದ್ಯಮ ಹೊಂದಿದ್ದು, ಬಾಲಕಿ ತಂದೆ ತಾಯಿ ಜತೆ ಅಲ್ಲಿ ಇದ್ದಳು. ಈ ಸಂದರ್ಭದಲ್ಲಿ ಹೋಟೆಲಿನ ನೌಕರ ಸಾಹಿಲ್‌ ಬಾಲಕಿಯ ಸ್ನೇಹ ಸಂಪಾದಿಸಿ ಪ್ರೀತಿಸುವ ನಾಟಕವಾಡಿದ್ದ.
2021ರ ಜುಲೈಯಲ್ಲಿ ಬಾಲಕಿ ಹುಟ್ಟುಹಬ್ಬ ಆಚರಿಸಲು ಬೈಂದೂರಿಗೆ ಬಂದಿರುವುದನ್ನು ತಿಳಿದು ಆರೋಪಿಯೂ ಬಂದಿದ್ದ. ಆಕೆಯನ್ನು ಪುಸಲಾಯಿಸಿ ಮದುವೆಯಾಗುವುದಾಗಿ ನಂಬಿಸಿ ಮನೆ ಪಕ್ಕದ ಕಾಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಅನಂತರ ಹಲವು ಬಾರಿ ಇದೇ ರೀತಿ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದ. ಈ ವಿಚಾರ ತಿಳಿದಾಗ ಬಾಲಕಿಯ ತಾಯಿ ಬೈಂದೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗಿನ ಪೊಲೀಸ್‌ ನಿರೀಕ್ಷಕ ಸಂತೋಷ್‌ ಎ. ಕಾಯ್ಕಿಣಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ದಾಖಲಿಸಿದ್ದರು. ನ್ಯಾಯಾಧೀಶ ಸುವರ್ಣ ಅವರು ಸಾಹಿಲ್‌ ಅಪರಾಧಿ ಎಂದು ತೀರ್ಪಿತ್ತು 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಇದಲ್ಲದೆ ಸಂತ್ರಸ್ತ ಬಾಲಕಿಗೆ 1.5 ಲಕ್ಷ ರೂ., ಪರಿಹಾರ ಮತ್ತು 22,500 ರೂ. ದಂಡ ಪಾವತಿಸಲು ಆದೇಶಿಸಿದ್ದಾರೆ.

















































error: Content is protected !!
Scroll to Top