ಎಸ್‌ಬಿಐಯಲ್ಲಿ ಹಿರಿಯರಿಗೆ 1031 ಹುದ್ದೆ

ಏ.30 ಅರ್ಜಿ ಸಲ್ಲಿಸಲು ಕೊನೆಯ ದಿನ

ಹೊಸದಿಲ್ಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1031 ಚಾನೆಲ್ ಮ್ಯಾನೇಜರ್ ಮತ್ತು ಸಪೋರ್ಟ್ ಆಫೀಸರ್ ಹುದ್ದೆಗಳಿಗೆ ಅರ್ಹಆಹ್ವಾನಿಸಲಾದೆ.
ನೋಂದಣಿ ಪ್ರಕ್ರಿಯೆ ಏ.1 ರಂದು ಪ್ರಾರಂಭವಾಗಿದ್ದು, ಏ.30, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಬ್ಯಾಂಕ್​​ನ ವೆಬ್‌ಸೈಟ್ sbi.co.in ಗೆ ತೆರಳಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಎಸ್​ಬಿಐನ ನಿವೃತ್ತ ಅಧಿಕಾರಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನೇಮಕಾತಿ ಅಭಿಯಾನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1031 ಹುದ್ದೆಗಳನ್ನು ಭರ್ತಿ ಮಾಡಲಿದೆ.

ಹುದ್ದೆಯ ವಿವರ

  • ಚಾನೆಲ್ ಮ್ಯಾನೇಜರ್ ಫೆಸಿಲಿಟೇಟರ್ -ಎನಿಟೈಮ್ ಚಾನೆಲ್ಸ್​ (CMF-AC): 821 ಹುದ್ದೆಗಳು
  • ಚಾನೆಲ್ ಮ್ಯಾನೇಜರ್ ಸೂಪರ್‌ವೈಸರ್- ಎನಿಟೈಮ್ ಚಾನೆಲ್ಸ್ (CMS-AC): 172 ಹುದ್ದೆಗಳು
  • ಸಪೋರ್ಟ್ ಆಫೀಸರ್ ಎನಿಟೈಮ್ ಚಾನೆಲ್ಸ್​ (SO-AC): 38 ಹುದ್ದೆಗಳು

ವಯೋಮಿತಿ

ಎಸ್​ಬಿಐ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಏ.1, 2023ಕ್ಕೆ ಕನಿಷ್ಠ 60 ವರ್ಷ ಮತ್ತು ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ

ಆಯ್ಕೆಯು ಶಾರ್ಟ್‌ಲಿಸ್ಟ್ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ. ಸಂದರ್ಶನವು 100 ಅಂಕಗಳನ್ನು ಹೊಂದಿರುತ್ತದೆ. ಸಂದರ್ಶನದಲ್ಲಿ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆಗಾಗಿ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.



















































































error: Content is protected !!
Scroll to Top