ಸುಸೂತ್ರವಾಗಿ ನಡೆಯಿತು ಮೊದಲ ದಿನದ ಪರೀಕ್ಷೆ

ಕಾರ್ಕಳದಲ್ಲಿ ಇಬ್ಬರು ಗೈರು

ಕಾರ್ಕಳ : ಕಾರ್ಕಳ – ಹೆಬ್ರಿ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಶುಕ್ರವಾರ ಸುಸೂತ್ರವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಿತು. ಕಾರ್ಕಳ ಹೆಬ್ರಿಯಲ್ಲಿ ಒಟ್ಟು 2,640 ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದವಣೆ ಮಾಡಿಕೊಂಡಿದ್ದರು. ಅವರಲ್ಲಿ 2, 531 ವಿದ್ಯಾರ್ಥಿಗಳು ಪ್ರಥಮ ಭಾಷೆ ಪರೀಕ್ಷೆ ಬರೆಯಬೇಕಿತ್ತು. ಮೊದಲ ದಿನ 2,529 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇಬ್ಬರು ಗೈರಾಗಿದ್ದಾರೆ. ಬೈಲೂರು ಹಾಗೂ ಬಜಗೋಳಿ ಪರೀಕ್ಷಾ ಕೇಂದ್ರದಲ್ಲಿ ತಲಾ ಓರ್ವರಂತೆ ಗೈರಾಗಿರುವರು. ಕಾರ್ಕಳ ಹೆಬ್ರಿಯ 10 ಪರೀಕ್ಷಾ ಕೇಂದ್ರಗಳಲ್ಲೂ ಯಾವೊಂದು ಗೊಂದಲ, ಸಮಸ್ಯೆ ಇಲ್ಲದೇ ಪರೀಕ್ಷೆ ನಡೆಯಿತು. ಪರೀಕ್ಷಾ ಕೇಂದ್ರಕ್ಕೊಬ್ಬರಂತೆ ಕೊಠಡಿ ಮೇಲ್ವಿಚಾರಕರು, ಕಸ್ಟೋಡಿಯನ್‌, ಮುಖ್ಯ ಅಧೀಕ್ಷರು, ಸ್ಥಳ ಜಾಗೃತಗಾರರು ಕರ್ತವ್ಯ ನಿರ್ವಹಿಸಿದ್ದು ಸುಸೂತ್ರವಾಗಿ ಪರೀಕ್ಷೆ ನಡೆಯುವಂತೆ ನೋಡಿಕೊಂಡರು.

































































































error: Content is protected !!
Scroll to Top