ಕಳಂಕ ತಂದವರ ವಿರುದ್ಧ ಕಠಿಣ ಕ್ರಮ ಕೈಗೊಂಡ ಕಾಲೇಜು
ಮಂಗಳೂರು : ಗಾಂಜಾ ಮಾರಾಟ ಮತ್ತು ಸೇವಿಸಿ ಸಿಕ್ಕಿಬಿದ್ದಿದ್ದ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಕೊನೆಗೂ ವಜಾಗೊಳಿಸಿದೆ.
ಡ್ರಗ್ ಕೇಸ್‌ನಲ್ಲಿ ಸಿಕ್ಕಿ ಬಿದ್ದ ಇಬ್ಬರು ವೈದ್ಯರು ಹಾಗೂ ಏಳು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ವೈದ್ಯರಿಗೆ ಕೆಎಂಸಿ ಆಸ್ಪತ್ರೆಯಿಂದ ಗೇಟ್‌ಪಾಸ್ ನೀಡಲಾಗಿದೆ. ಇಬ್ಬರು ವೈದ್ಯರನ್ನು ವಜಾ ಮಾಡಿ ಗುತ್ತಿಗೆ ರದ್ದುಪಡಿಸಿರುವ ಆಸ್ಪತ್ರೆ ಆಡಳಿತ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ.
ಕೆಎಂಸಿ ಮೆಡಿಕಲ್ ಆಫೀಸರ್ ಆಗಿದ್ದ ಕೇರಳ ಮೂಲದ ವೈದ್ಯ ಡಾ.ಸಮೀರ್ (32) ಮತ್ತು ಮೆಡಿಕಲ್ ಸರ್ಜನ್ ಆಗಿದ್ದ ತಮಿಳುನಾಡು ಮೂಲದ ಮಣಿಮಾರನ್ ಮುತ್ತು (28) ಎಂಬವರನ್ನು ವಜಾ ಮಾಡಲಾಗಿದೆ. ಉಳಿದ ಏಳು ವೈದ್ಯಕೀಯ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಡಾ. ನದಿಯಾ ಸಿರಾಜ್(24)- ಕೇರಳ- ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ, ಡಾ.ವರ್ಷಿಣಿ ಪ್ರತಿ (26)- ಆಂಧ್ರಪ್ರದೇಶ- ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ, ಡಾ.ಹೀರಾ ಬಸಿನ್(26)- ಮಹಾರಾಷ್ಟ್ರ- ಎಂ.ಬಿ.ಬಿ.ಎಸ್, ಡಾ.ಕ್ಷಿತಿಜ್ ಗುಪ್ತ(23)-ದೆಹಲಿ- ಎಂ.ಎಸ್. ಆರ್ಥೋ ವಿದ್ಯಾರ್ಥಿ,ಡಾ.ವರ್ಷ ಕುಮಾರ್(27)-ತುಮಕೂರು- ಪೆಥಾಲಜಿ ಎಂ.ಡಿ ವಿದ್ಯಾರ್ಥಿ, ಡಾ.ಕಿಶೋರಿಲಾಲ್ ರಾಮ್ ಜೀ(38)-ಎಂ.ಬಿ.ಬಿ.ಎಸ್ ವಿದ್ಯಾರ್ಥಿ, (ಫೇಲ್ ಆಗಿ 15 ವರ್ಷದಿಂದ ವಿದ್ಯಾಭ್ಯಾಸ) ಕೆಎಂಸಿ ಡೆಂಟಲ್ ಕಾಲೇಜು ವಿದ್ಯಾರ್ಥಿನಿ
ಡಾ.ರಿಯಾ ಚಡ್ಡ(22)-ಪಂಜಾಬ್- ಡೆಂಟಲ್ ಬಿಡಿಎಸ್ ವಿದ್ಯಾರ್ಥಿನಿಯನ್ನು ಅಮಾನತು ಮಾಡಲಾಗಿದೆ.
ಮಂಗಳೂರು: ಗಾಂಜಾ ಕೇಸಲ್ಲಿ ಮತ್ತಿಬ್ಬರು ವೈದ್ಯರ ಬಂಧನ.
























