ಅ.18: ಸಚಿವ ಸುನೀಲ್‌ ಕುಮಾರ್‌ ಕಾರ್ಯಕ್ರಮದ ವಿವರ

ಕಾರ್ಕಳ : ಅ.18ರ ಮಂಗಳವಾರದಂದು ಸಚಿವ ಸುನೀಲ್‌ ಕುಮಾರ್‌ ಭಾಗವಹಿಸುವ ಕಾರ್ಯಕ್ರಮದ ವಿವರ ಇಂತಿದೆ.
ಬೆಳಿಗ್ಗೆ ಗಂಟೆ 8:30ಕ್ಕೆ ಇರ್ವತ್ತೂರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನೂತನ ಕಟ್ಟಡ ಹಾಗೂ ನೂತನವಾಗಿ ನಿರ್ಮಾಣವಾದ ರಸ್ತೆ ಉದ್ಘಾಟನೆ, ಮಧ್ಯಾಹ್ನ 2ಕ್ಕೆ ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹಾನಗರ ಪಾಲಿಕ ಪರಿಶೀಲನಾ ಸಭೆ, 3ಕ್ಕೆ ಮಂಗಳೂರಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮತ್ತು ಅಹವಾಲು ಸ್ವೀಕಾರ, ಸಂಜೆ 4:30ಕ್ಕೆ ದ.ಕ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ʼಕೋಟಿ ಕಂಠ ಗಾಯನʼ ಕಾರ್ಯಕ್ರಮದ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರಮುಖರೊಂದಿಗೆ ಸಭೆ, ಸಂಜೆ 6:30ಕ್ಕೆ ಕಾರ್ಕಳ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಭಾಗೀಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಯೋಗಾಸ್ಪರ್ಧೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.error: Content is protected !!
Scroll to Top