ಸ್ಕೂಟರ್‌ ಗೆ ಬಸ್ ಡಿಕ್ಕಿ – ಸವಾರ ಸಾವು

ಕಾರ್ಕಳ : ಚಲಿಸುತ್ತಿದ್ದ ಸ್ಕೂಟರ್ ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾದ ಘಟನೆ ಜಾರ್ಕಳ ಜಂಕ್ಷನ್‌ನಲ್ಲಿ ಸಂಭವಿಸಿದ್ದು, ಪರಿಣಾಮ ಸ್ಕೂಟರ್‌ ಸವಾರ ಸಾವಿಗೀಡಾದ ಘಟನೆ ನಡೆದಿದೆ. ಕುಕ್ಕುಂದೂರು ಗ್ರಾಮದ ಟಪ್ಪಾಲುಕಟ್ಟೆ ಮಹಾಲಿಂಗ (33) ಎಂಬಾವರೇ ಮೃತಪಟ್ಟ ದುರ್ದೈವಿ.

ಮೇ 5ರಂದು ಎರ್ಲಪ್ಪಾಡಿ ರಸ್ತೆಯಿಂದ ಜಾರ್ಕಳ ರಸ್ತೆ ಕಡೆಗೆ ಸ್ಕೂಟರ್‌ನಲ್ಲಿ ಸಾಗುತ್ತಿದ್ದಾಗ, ಕಾರ್ಕಳದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸವಾರ ಮಹಾಲಿಂಗ ಹಾಗೂ ಸಹಸವಾರೆ ಶಾರದ ರಸ್ತೆಗೆ ಬಿದ್ಧು ಗಾಯಗೊಂಡಿರುತ್ತಾರೆ. ಮಹಾಲಿಂಗ ಅವರು ಧರಿಸಿದ್ಧ ಹೆಲ್ಮೆಟ್ ಜಖಂಗೊಂಡಿದೆ. ಗಾಯಾಳುಗಳನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಹಾಲಿಂಗ ಅವರು ಈ ವೇಳೆಗೆ ಕೊನೆಯುಸಿರೆಳೆದರು. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











































































error: Content is protected !!
Scroll to Top