ಶ್ರೀಕಾಕುಳಂ : ತಾನು ತೋಡಿದ ಖೆಡ್ಡಾಗೆ ಕಳ್ಳನೋರ್ವ ಸಿಲುಕಿ ಪೊಲೀಸರ ಅತಿಥಿಯಾಗಿದ್ದಾನೆ. ಕದ್ದ ಮಾಲುಗಳೊಂದಿಗೆ ಪಾರಾರಿಯಾಗುವಾಗ ತಾನೇ ತೋಡಿದ ಹಳ್ಳಕ್ಕೆ ಬಿದ್ದಿದ್ದಾನೆ.
ಈ ಘಟನೆ ನಡೆದಿದ್ದು, ಆಂಧ್ರಪ್ರದೇಶದ ಶ್ರೀಕಾಕುಳಂ ಎಂಬಲ್ಲಿ. ಕಳ್ಳನೊಬ್ಬ ದೇವಾಲಯವೊಂದರಿಂದ ಆಭರಣಗಳನ್ನು ಕದಿಯಲು ದೇವಸ್ಥಾನದ ಗೋಡೆಯಲ್ಲಿ ರಂಧ್ರ ಕೊರೆದಿದ್ದಾನೆ. ದೇಗುಲವನ್ನು ದೋಚಿ ಹೊರ ಬರುವಾಗ, ರಂಧ್ರದಲ್ಲಿ ಸಿಲುಕಿ ಹೊರ ಬರಲು ಆಗದೇ ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳನನ್ನು 30 ವರ್ಷದ ಪಾಪ ರಾವ್ ಎಂದು ಗುರುತಿಸಲಾಗಿದೆ.
ದೇವಸ್ಥಾನದ ಕಿಟಕಿ ಒಡೆದು ಒಳಗೆ ನುಗ್ಗಿದ್ದ ಕಳ್ಳ, ದೇವರ ಆಭರಣ ಹಾಗೂ ಇನ್ನಿತರ ಬೆಲೆ ಬಾಳುವ ವಸ್ತುಗಳೊಂದಿಗೆ ಅಲ್ಲಿಂದ ಜಾಗ ಖಾಲಿ ಮಾಡಲು ಪ್ರಯತ್ನಿಸಿದ್ದಾನೆ. ಆದರೆ ಪರಾರಿಯಾಗುವ ವೇಳೆ ದೇವಸ್ಥಾನದ ಗೋಡೆಯಲ್ಲಿ ತಾನೇ ಕೊರೆದಿದ್ದ ರಂಧ್ರದಲ್ಲಿ ಸಿಲುಕಿದ್ದಾನೆ. ಕೊನೆಗೆ ವಿಧಿ ಇಲ್ಲದೇ ಸಹಾಯಕ್ಕಾಗಿ ಕೂಗಾಡಿದ್ದಾನೆ. ನಿದ್ದೆಯಲ್ಲಿದ್ದ ಗ್ರಾಮಸ್ಥರು ಎದ್ದು, ದೇವಸ್ಥಾನಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ರಂಧ್ರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ್ದಾರೆ.
ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆ ಶ್ರೀಕಾಕುಳಂನ ಜಾಮಿ ಯೆಲ್ಲಮ್ಮ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.