ಹಾಸನ : ಯುಗಾದಿಯ ಹೊಸ ಸಂವತ್ಸರದಲ್ಲಿ ಜಗತ್ತಿನ ಆಗು ಹೋಗುಗಳ ಕುರಿತು ಕೋಡಿಮಠದ ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕಳೆದೆರಡು ವರ್ಷಗಳಿಂದ ಕೋವಿಡ್ನಿಂದ ಬಳಲಿದ್ದು, ಜಗತ್ತು ಇನ್ನಷ್ಟು ತಲ್ಲಣಕ್ಕೆ ಒಳಗಾಗಲಿದೆ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಈ ಬಾರಿ ಮುಂಗಾರು ಚೆನ್ನಾಗಿ ಆಗುತ್ತದೆ ಆದರೆ, ಹಿಂಗಾರು ಕಡಿಮೆ ಆಗಲಿದೆ ಇದರಿಂದ ಜನರು ಸಂಕಷ್ಟ ಪಡುವಂತೆ ಆಗುತ್ತದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಅಶಾಂತಿ, ಮತೀಯಗಲಭೆ, ದೊಂಬಿಗಳು, ಸಾವು-ನೋವುಗಳು ಕೊಲೆಗಳಾಗುತ್ತವೆ. ವಿಶೇಷವಾಗಿ ಎಲೆಕ್ಟ್ರಿಕ್‌ನಿಂದ ಅಪಾಯವಿದೆ ಎಂದಿದ್ದಾರೆ. ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿಂತಾರೆ ಎಂಬ ಭಯಾನಕ ಭವಿಷ್ಯ ತಿಳಿಸಿದ್ದು, ಬೆಂಕಿಯ ಅನಾಹುತ ಜಾಸ್ತಿ, ಗಾಳಿ, ಸಿಡಿಲು, ಗುಡುಗು ವಿಪರೀತ ಆಗಲಿದ್ದು, ಇಲ್ಲಿಯತನಕ ಕಂಡು ಕೇಳರಿಯದ ಬಹುದೊಡ್ಡ ಅಘಾತ ಭಾರತದಲ್ಲಿ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.
Recent Comments
ಕಗ್ಗದ ಸಂದೇಶ
on