ಕಾರ್ಕಳ : ಕಾರ್ಕಳ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೆಚ್.ಕೆ. ಸುಂದರ್ ಅವರು ಮಾ. 31ರಂದು ನಿವೃತ್ತಿ ಹೊಂದಲಿದ್ದಾರೆ. ಮೂಲತಃ ಕೊಡಗಿನ ಕುಶಾಲನಗರ ಹೆಬ್ಬಾಳೆಯವರಾದ ಸುಂದರ ಅವರು ಮೈಸೂರು ಸಿಐಟಿಬಿ (ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್) ನಲ್ಲಿ ವೃತ್ತಿ ಜೀವನ ಆರಂಭಿಸಿದರು. 1984ರಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಸನ ಉಪವಿಭಾಗಕ್ಕೆ ಸೇರ್ಪಡೆಗೊಂಡರು. ತದನಂತರ ಕುಶಾಲನಗರ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, 1996 ಉಡುಪಿ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಹೊಂದಿದರು.
15 ವರ್ಷ ಕಾರ್ಕಳದಲ್ಲಿ ಕರ್ತವ್ಯ
2005ರಲ್ಲಿ ಕಾರ್ಕಳ ಲೋಕೋಪಯೋಗಿ ಇಲಾಖೆಗೆ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಜವಾಬ್ದಾರಿ ವಹಿಸಿಕೊಂಡ ಸುಂದರ್ ಅವರು ಆ ಬಳಿಕ ಎಇಇ ಆಗಿ ಭಡ್ತಿಗೊಂಡರು.