Wednesday, July 6, 2022
spot_img
Homeಸುದ್ದಿರಾಜ್ಯ ಬಜೆಟ್‌ 2022-23 - ಮುಖ್ಯಾಂಶಗಳು

ರಾಜ್ಯ ಬಜೆಟ್‌ 2022-23 – ಮುಖ್ಯಾಂಶಗಳು

ಬೆಂಗಳೂರು : ಮುಖ್ಯಮಂತ್ರಿ ಬೊಮ್ಮಾಯಿ 2022-23 ನೇ ಸಾಲಿನ ತಮ್ಮ ಚೊಚ್ಚಲ ಬಜೆಟ್‌ ಮಂಡಿಸಿದ್ದು ಬಜೆಟ್‌ಗಾತ್ರ 2 ಲಕ್ಷ 60 ಸಾವಿರ ಕೋಟಿ ರೂ. ಆಗಿದ್ದು ಬಜೆಟ್‌ ನಲ್ಲಿ ರಾಜ್ಯದ ಅಭಿವೃದ್ದಿಗೆ ಪಂಚಸೂತ್ರ ರೂಪಿಸಿದ್ದು, ಶಿಕ್ಷಣ, ಉದ್ಯೋಗ ಸಬಲೀಕರಣ, ಆರೋಗ್ಯ ಸೂತ್ರ ಅಳವಡಿಸಿಕೊಳ್ಳಲಾಗಿದೆ ಎಂದು ಮಾ.4ರಂದು ಬೊಮ್ಮಾಯಿ ತಿಳಿಸಿದ್ದಾರೆ.
ಆಹಾರ – 2,288 ಕೋಟಿ ರೂ., ವಸತಿ – 3,594 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ – 4,713 ಕೋಟಿ ರೂ., ಕೃಷಿ & ತೋಟಗಾರಿಕೆ – 8,457 ಕೋಟಿರೂ., ಸಮಾಜ ಕಲ್ಯಾಣ – 9,389 ಕೋಟಿ ರೂ., ಲೋಕೋಪಯೋಗಿ – 10,447 ಕೋಟಿ ರೂ., ಒಳಾಡಳಿತ ಮತ್ತು ಸಾರಿಗೆ – 11,222 ಕೋಟಿ ರೂ., ಜಲ ಸಂಪನ್ಮೂಲ – 20,601 ಕೋಟಿ ರೂ., ಶಿಕ್ಷಣ – 31,980 ಕೋಟಿ ರೂ., ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ – 17,325 ಕೋಟಿ ರೂ., ನಗರಾಭಿವೃದ್ಧಿ – 16,076 ಕೋಟಿ ರೂ., ಕಂದಾಯ – 16,388 ಕೋಟಿ ರೂ., ಆರೋಗ್ಯ & ಕುಟುಂಬ ಕಲ್ಯಾಣ – 13,982 ಕೋಟಿ ರೂ., ಇಂಧನ – 12,655 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದೆ.
ರಾಜ್ಯದಲ್ಲಿ ವಿನೂತನ ಮಾದರಿಯ 7 ಹೊಸ ವಿಶ್ವವಿದ್ಯಾಲಯಗಳನ್ನು ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಹಾಗೂ ಬಾಗಲಕೋಟೆಯಲ್ಲಿ ಸ್ಥಾಪಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದು, ಮೇಕೆದಾಟು ಯೋಜನೆಗೆ 1000 ಕೋಟಿ ರೂ. ಅನುದಾನ, ಆಶಾ ಕಾರ್ಯಕರ್ತೆಯರ ಗೌರವ ಧನದಲ್ಲಿ 1000 ರೂ. ಹೆಚ್ಚಳ, ಪೌರಕಾರ್ಮಿಕರಿಗೆ 2000 ರೂ. ಮಾಸಿಕ ಸಂಕಷ್ಟ ಭತ್ಯೆ, ಉಡುಪಿ, ದ.ಕ, ಉ.ಕ, ಶಿವಮೊಗ್ಗದಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆ ಆರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!