ಕಾರ್ಕಳ ಉತ್ಸವ : ಹೆಲಿಕಾಫ್ಟರ್‌ ವಿಹಾರಕ್ಕೆ ಬುಕ್ಕಿಂಗ್‌ ಆರಂಭ

ಕಾರ್ಕಳ : ಕಾರ್ಕಳ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಹೆಲಿಕಾಫ್ಟರ್‌ ವಿಹಾರವೂ ಒಂದು. ಹೆಲಿಕಾಪ್ಟರ್‌ ವಿಹಾರ ಬಯಸುವವರು ಮಾ. 8ರಿಂದ ಸ್ವರಾಜ್‌ ಮೈದಾನದಲ್ಲಿರುವ ಕಾರ್ಯಾಲಯದಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ಮಾ. 10ರಿಂದ 15 ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಹೆಲಿಕಾಫ್ಟರ್‌ ವಿಹಾರ ನಡೆಯಲಿದ್ದು, 10 ನಿಮಿಷದ ವಿಹಾರಕ್ಕೆ ಒಬ್ಬರಿಗೆ 2500 ರೂ. ದರವಾಗಿದೆ. ಏಕಕಾಲಕ್ಕೆ 6 ಮಂದಿ ವಿಹಾರ ನಡೆಸಬಹುದಾಗಿದೆ.

ರಿಯಾಯಿತಿ
ವಿಹಾರಕ್ಕೆ ತಗಲುವ ವೆಚ್ಚವು ರೂ. 4500 ಆಗಿದ್ದು ಜನಸಾಮಾನ್ಯರೂ ಹೆಲಿಕಾಪ್ಟರ್‌ ನಲ್ಲಿ ಪ್ರಯಾಣಿಸುವಂತಾಗಬೇಕೆಂಬ ನಿಟ್ಟಿನಲ್ಲಿ 2500 ರೂ. ನಿಗದಿಪಡಿಸಲಾಗಿದೆ. ಉಳಿದ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು ಎಂದು ಕಾರ್ಕಳ ಉತ್ಸವದ ರೂವಾರಿ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ರೋಷನ್‌ ಶೆಟ್ಟಿ – 9845432303
ರಶ್ಮಿತಾ ಶೆಟ್ಟಿ – 7022605097
ಸತೀಶ್‌ ಗೋರೆ – 9845333471
ಸುಬ್ರಹ್ಮಣ್ಯ ಭಟ್‌ ರೆಂಜಾಳ – 9945376122

error: Content is protected !!
Scroll to Top