ಮಾ. 6 : ಕುಕ್ಕುಂದೂರು ಫ್ರೆಂಡ್ಸ್‌ 13 ನೇ ವಾರ್ಷಿಕೋತ್ಸವ

ಕಾರ್ಕಳ : ಕುಕ್ಕುಂದೂರು ಫ್ರೆಂಡ್ಸ್‌ನ 13ನೇ ವಾರ್ಷಿಕೋತ್ಸವ ಟಪ್ಪಾಲುಕಟ್ಟೆ ಸಮಾಜ ಮಂದಿರ ಬಳಿ ಮಾ. 6ರಂದು ನಡೆಯಲಿದೆ. ವಾರ್ಷಿಕೋತ್ಸವ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಲಿದ್ದು, ಅಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, 9.30 ರಿಂದ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ ಗಂಟೆ 4 ರಿಂದ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಉಮೇಶ್‌ ಮಿಜಾರ್‌ ರಚಿಸಿ, ನಿರ್ದೇಶಿಸಿರುವ ʼಮನಸ್‌ ಮೈದಾನ್ʼ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಸಭಾ ಕಾರ್ಯಕ್ರಮ
ರಾತ್ರಿ ಗಂಟೆ 8ರಿಂದ ಶ್ರೀ ದುರ್ಗಾದೇವಿ ಅನುದಾನಿತ ಶಾಲಾ ಬಳಿ ನಡೆಯುವ ಸಭಾ ಕಾರ್ಯಕ್ರಮವನ್ನು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶಂಕರನಾರಾಯಣ ಭಟ್‌ ಉದ್ಘಾಟಿಸಲಿರುವರು. ಸಾಂದಿಪನಿ ಸಾಧನಾಶ್ರಮ ಕ್ಷೇತ್ರ ಕೇಮಾರಿನ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಡಾ. ಸುಧೀರ್‌ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ದುರ್ಗಾದೇವಿ ಅನುದಾನಿತ ಹಿ. ಪ್ರಾ. ಶಾಲಾ ಸಂಚಾಲಕ ರಾಜೇಂದ್ರ ಕುಮಾರ್‌ ಬಲ್ಲಾಳ್‌, ಮುಂಬೈ ರಾಜಲಕ್ಷ್ಮೀ ಹಾಸ್ಪಿಟಾಲಿಟಿ ಸರ್ವೀಸಸ್‌ನ ನಿರ್ದೇಶಕ ಚಂದ್ರಶೆಖರ ಶೆಟ್ಟಿ, ಶಾಲಾ ಮುಖ್ಯಶಿಕ್ಷಕಿ ಸುಜಾತಾ ಎನ್‌. ರಾಜ್‌, ಉದ್ಯಮಿ ಕಮಲಾಕ್ಷ ನಾಯಕ್‌, ಕುಕ್ಕುಂದೂರು ಫ್ರೆಂಡ್ಸ್‌- ಮುಂಬೈನ ಅಧ್ಯಕ್ಷ ರವೀಂದ್ರ ಶೆಟ್ಟಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.























error: Content is protected !!
Scroll to Top