ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನ

ಚೆನ್ನೈ : ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ಕುನ್ನೂರಿನಲ್ಲಿ ಪತನಗೊಂಡಿದೆ. ಅವಘಡದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದ್ದು, ಇಬ್ಬರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ.

ಹೆಲಿಕಾಪ್ಟರ್‌ನಲ್ಲಿ ಬಿಪಿನ್‌ ರಾವತ್‌ ಅವರ ಪತ್ನಿ ಸೇರಿ ಕುಟುಂಬಸ್ಥರು ಕೂಡ ಇದ್ದರು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್ ಕಂಟೋನ್ಮೆಂಟ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಹೆಲಿಕಾಪ್ಟರ್‌ ಪತನದ ಬಗ್ಗೆ ತನಿಖೆ ನಡೆಸಲು ಭಾರತೀಯ ವಾಯುಸೇನೆ ಆದೇಶಿಸಿದೆ.
ನೀಲಗಿರಿ ತಪ್ಪಲಿನಲ್ಲಿ ಹೆಲಿಕಾಪ್ಟರ್‌ ದುರಂತ ಸಂಭವಿಸಿದ್ದು, ಹೆಲಿಕಾಪ್ಟರ್‌ನಲ್ಲಿ 14 ಜನ ಇದ್ದರು ಎನ್ನಲಾಗಿದೆ. ಎಂಐ-17 ಹೆಲಿಕಾಪ್ಟರ್‌ ಸುಳೂರು ವಾಯು ನೆಲೆಯಿಂದ ವೆಲ್ಲಿಂಗ್ಟನ್‌ ಸೇನಾ ಕಾಲೇಜಿಗೆ ಬಿಪಿನ್‌ ರಾವತ್‌ ತೆರಳುತ್ತಿದ್ದರು. ಈಗಾಗಲೇ ಹೆಲಿಕಾಪ್ಟರ್‌ ಪತನದ ಬಗ್ಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.

















































error: Content is protected !!
Scroll to Top