Tuesday, December 7, 2021
spot_img
Homeಸ್ಥಳೀಯ ಸುದ್ದಿಕಾರ್ಕಳ : ಒಟ್ಟಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ತಾಯಿ-ಮಗ

ಕಾರ್ಕಳ : ಒಟ್ಟಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ತಾಯಿ-ಮಗ

ಮಗನಿಗೆ 559, ಅಮ್ಮನಿಗೆ 458 ಅಂಕ

ತಾಯಿಗೆ ನೆರವಾಯಿತು ಮಗನ ಆನ್‌ಲೈನ್‌ ಕ್ಲಾಸ್‌

ಕಾರ್ಕಳ : ಒಟ್ಟಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ ಕಾರ್ಕಳ ತಾಲೂಕು ತೆಳ್ಳಾರು ಮಿತ್ತಬೆಟ್ಟುವಿನ ತಾಯಿ-ಮಗ ಇಬ್ಬರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ದುರ್ಗಾ ತೆಳ್ಳಾರಿನ ಬಿ. ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿ ವಿಕ್ರಂ 559 ಅಂಕ ಪಡೆಯುವುದರೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದರೆ ತಾಯಿ ಲತಾ ಅವರಿಗೆ 458 ಅಂಕ ದೊರೆತಿದೆ. ಸಂಸ್ಥೆಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಲತಾ ಅವರ ಶಿಕ್ಷಣ ಮೊಟಕುಗೊಂಡಿದ್ದ ಕಾರಣ ನೇರವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು.

ನೆರವಾಯಿತು ಆನ್‌ಲೈನ್‌ ಕ್ಲಾಸ್‌
ಕೋವಿಡ್‌ ಕಾರಣದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್‌ ನೀಡಲಾಗುತ್ತಿತ್ತು. ವಿಕ್ರಂಗೆ ಶಿಕ್ಷಕರು ಆನ್‌ ಲೈನ್‌ ಕ್ಲಾಸ್‌ ನೀಡುತ್ತಿದ್ದ ಸಂದರ್ಭ ತಾಯಿ ಲತಾ ಅವರು ಆನ್‌ಲೈನ್‌ ತರಗತಿಗೆ ಹಾಜರಾಗುತ್ತಿದ್ದರು.

ಮಗನಲ್ಲಿ ಕೇಳಿ ಕಲಿಯುತ್ತಿದ್ದೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಮಗನ ಆನ್‌ಲೈನ್‌ ಕ್ಲಾಸ್‌ ನನಗೆ ಸಹಕಾರಿಯಾಗಿದೆ. ಅರ್ಥವಾಗದ ವಿಷಯ ಕುರಿತು ಮಗನೊಂದಿಗೆ ಚರ್ಚೆ ಮಾಡುತ್ತಿದ್ದೆ. ನನ್ನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಗಂಡ ಹಾಗೂ ತೆಳ್ಳಾರು ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸ್ಮಿತಾ ಹಾಗೂ ಶಿಕ್ಷಕ ವೃಂದದವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ.

ಲತಾ

ತಾಯಿ-ಮಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ಸಾಕಷ್ಟು ತಯಾರಿ ನಡೆಸಿದ್ದರು. ಇದೀಗ ಅವರು ಪಡೆದಿರುವ ಫಲಿತಾಂಶ ನೋಡಿ ಬಹಳ ಖುಷಿಯಾಗಿದೆ ಎಂದು ಕಾರ್ಕಳದ ಖ್ಯಾತ ಛಾಯಾಗ್ರಾಹಕರಾಗಿರುವ ರಾಮಕೃಷ್ಣ ಪೂಜಾರಿ ನ್ಯೂಸ್‌ ಕಾರ್ಕಳಕ್ಕೆ ತಿಳಿಸಿರುತ್ತಾರೆ. ಇದೇ ಶಾಲೆಯ ಪ್ರಿಯಾ 611 ಹಾಗೂ ಶ್ರಾವ್ಯ 530 ಅಂಕ ಗಳಿಸಿರುತ್ತಾರೆ. ಕಳೆದ ವರ್ಷ ಈ ಶಾಲೆಯು ಶೇ. 100 ಫಲಿತಾಂಶ ದಾಖಲಿಸಿದ್ದು ಉಲ್ಲೇಖನೀಯ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!