ಭೀಕರ ದೃಶ್ಯ: ಬಂಡೆಗಳು ಬಿದ್ದು ಸೇತುವೆ ಕುಸಿತ: 9 ಪ್ರವಾಸಿಗರ ದುರ್ಮರಣ

ಹಿಮಾಚಲ ಪ್ರದೇಶ: ಸಾಂಗ್ಲಾ ಕಣಿವೆಯಲ್ಲಿ ಭಾರಿ ಭೂಕುಸಿತ ಉಂಟಾಗಿ ಬೃಹತ್‌ ಗಾತ್ರದ ಬಂಡೆಗಳು ಉರುಳಿದ ಪರಿಣಾಮ ಸೇತುವೆ ಕೊಚ್ಚಿ ಹೋಗಿದೆ. ಈ ಭೀಕರ ಘಟನೆಯಲ್ಲಿ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಪರ್ವತದ ತುದಿಯಿಂದ ಕಲ್ಲುಬಂಡೆಗಳು ಕಣಿವೆಯ ಕೆಳಕ್ಕೆ ಉರುಳಿ ಬಂದು ಅಪ್ಪಳಿಸುವ ಭಯಾನಕ ವಿಡಿಯೋ ವೈರಲ್‌ ಆಗಿದೆ. ಬೃಹತ್‌ ಕಲ್ಲುಬಂಡೆಯೊಂದು ಬೆಟ್ಟದ ತುದಿಯಿಂದ ವೇಗವಾಗಿ ಉರುಳಿ ಬಂದಿದ್ದು ಅದು ಅಪ್ಪಳಿಸಿದ ರಭಸಕ್ಕೆ ಸೇತುವೆಯ ಭಾಗವೊಂದು ನದಿ ಸೇರಿದೆ.

























error: Content is protected !!
Scroll to Top