ಕಾರ್ಕಳ : ಹೆಬ್ರಿ ತಾಲೂಕು ಶೇಡಿಮನೆ ಗ್ರಾಮದ ಅರಸಮ್ಮಕಾನಕ್ಕೆ ಬೇಟೆಯಾಡಲು ಬಂದ ನಾಲ್ವರನ್ನು ಅಮಾಸೆಬೈಲು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶೇಡಿಮನೆ ಗ್ರಾಮದ ಸುಕುಮಾರ ಶೆಟ್ಟಿ ಎಂಬವರ ತೋಟಕ್ಕೆ ಜು. 29ರ ರಾತ್ರಿ ಕಾರ್ಕಳ ಕಾಬೆಟ್ಟು ಚರ್ಚ್ ರೋಡ್ ಬಳಿಯ ಸ್ಟಾನಿ ಸ್ಲೇವಿಸ್ ಪಾಯಸ್, ಕುಕ್ಕುಂದೂರು ಗ್ರಾಮದ ನಕ್ರೆ ಮೆಲ್ವಿನ್ ಫ್ರಾಕ್ಸಿ ಡಿ ಸೋಜಾ, ಹೆಬ್ರಿ ಜಡ್ಡೋಳಿ ಬಚ್ಚಪ್ಪುವಿನ ಅಕ್ಷಯ ಪೂಜಾರಿ, ಆನೆಕೆರೆ ನಿವಾಸಿ ಮೋಹನ್ ಅವರು ಅಕ್ರಮ ಪ್ರವೇಶ ಮಾಡಿ ಬೇಟೆಯಾಡಲು ಯತ್ನಿಸಿದ್ದರು. ಗುಂಡಿನ ಶಬ್ದ ಕೇಳಿ ಸುಕುಮಾರ್ ಶೆಟ್ಟಿ ಹೊರಗಡೆ ಬಂದು ನೋಡಿದಾಗ ಬೇಟೆಯಾಡಲು ಬಂದಿರುವುದಾಗಿ ತಿಳಿದುಬಂತು. ಅವರಲ್ಲಿ ಡಿಬಿಬಿಎಲ್ ಬಂದೂಕು ಮತ್ತು ಬಂದೂಕಿಗೆ ಉಪಯೋಗಿಸುವ 6 ಗುಂಡುಗಳಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೆಬ್ರಿ : ಬೇಟೆಯಾಡಲು ಬಂದವರ ಬಂಧನ









































