Sunday, January 16, 2022
spot_img
Homeಸ್ಥಳೀಯ ಸುದ್ದಿಎಣ್ಣೆಹೊಳೆಯಲ್ಲಿ ಬಿಜೆಪಿ ಮಂಡಲ ಕಾರ್ಯಕಾರಿಣಿ

ಎಣ್ಣೆಹೊಳೆಯಲ್ಲಿ ಬಿಜೆಪಿ ಮಂಡಲ ಕಾರ್ಯಕಾರಿಣಿ

ಕಾರ್ಕಳ : ಶಾಸಕ ಸುನಿಲ್‌ ಕುಮಾರ್‌ ಕಾರ್ಯವೈಖರಿ ಶ್ಲಾಘನೀಯವಾದುದು. ಸಂಘಟನ ಚತುರ, ಕಾರ್ಕಳ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುತ್ತಿರುವ ಕ್ರೀಯಾಶೀಲ ಶಾಸಕ ಸುನಿಲ್‌ ಕುಮಾರ್‌ ಮಂತ್ರಿಯಾಗಿ ಬರಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ಅಭಿಪ್ರಾಯಪಟ್ಟರು.
ಅವರು ಜು. 30ರಂದು ಎಣ್ಣೆಹೊಳೆ ಶ್ರೀ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬಿಜೆಪಿ ಮಂಡಲ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು. ಸುನಿಲ್‌ ಕುಮಾರ್‌ ಪ್ರತಿಯೊಂದು ಕಾರ್ಯವನ್ನೂ ಅತ್ಯಂತ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ನಡೆಸಿಕೊಡುತ್ತಾರೆ. ದೂರದೃಷ್ಟಿ ಯೋಚನೆ-ಯೋಜನೆಗಳ ಮೂಲಕ ಕಾರ್ಕಳವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದವರು ಬಣ್ಣಿಸಿದರು.

ಬೂತ್‌ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು-ಮಹಾವೀರ ಹೆಗ್ಡೆ
ಗ್ರಾಮ ಪಂಚಾಯತ್‌ ಸದಸ್ಯರು ಪಕ್ಷದ ಘನತೆಯನ್ನು ಕಾಪಾಡಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಈ ಮೂಲಕ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕೆಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ತಿಳಿಸಿದರು.
2004ರಲ್ಲಿ ಹಿಂದುತ್ವ, 2008ರಲ್ಲಿ ಅಭಿವೃದ್ಧಿ ಮಂತ್ರವೇ ನಮ್ಮ ಅಜೆಂಡವಾಗಿತ್ತು. ಶಾಸಕರು ಸರಕಾರದಿಂದ ಗರಿಷ್ಠ ಅನುದಾನ ತರಿಸುವ ಮೂಲಕ ಕಾರ್ಕಳವನ್ನು ಎಲ್ಲ ಕ್ಷೇತ್ರದಲ್ಲೂ ಅಮೂಲಾಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. ಮುಳಿಹುಲ್ಲಿನ ಮನೆಯವರಿಗೆ ಹಂಚು ವಿತರಣೆ, ಸರಕಾರಿ ಕೆರೆ ಅಭಿವೃದ್ದಿ, ಉದ್ಯೋಗ ಮೇಳವನ್ನು ಯಶಸ್ವಿಯಾಗಿ ಸಂಘಟಿಸಿ ಮಾದರಿ, ದಕ್ಷ ಆಡಳಿತಗಾರೆನಿಸಿಕೊಂಡಿರುವ ಸುನಿಲ್‌ ಕುಮಾರ್‌ ಸಚಿವರಾಗಬೇಕೆಂದು ಮಹಾವೀರ ಹೆಗ್ಡೆ ಹೇಳಿದರು.

ಪುಕ್ಸಟೆ ಪ್ರಚಾರ
ಕಾಂಗ್ರೆಸ್‌ನವರು ಕೇವಲ ಪುಕ್ಸಟೆ ಪ್ರಚಾರಕ್ಕಾಗಿ ಪ್ರತಿಭಟನೆ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಕೇವಲ ಪ್ರಚಾರಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎನ್ನುವುದು ಅವರಿಗೂ ಗೊತ್ತಿದೆ. ನಮಗೂ ತಿಳಿಸಿದೆ ಎಂದು ಮಹಾವೀರ ಹೆಗ್ಡೆ ಕಾಂಗ್ರೆಸ್‌ ಕುರಿತು ವ್ಯಂಗ್ಯವಾಡಿದರು.

ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಗೇರು ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷೆ ಸವಿತಾ ಕೋಟ್ಯಾನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ರವೀಂದ್ರ ಕುಮಾರ್, ರೇಷ್ಮಾ ಉದಯ ಶೆಟ್ಟಿ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ನವೀನ್‌ ನಾಯಕ್‌, ಜಯರಾಮ ಸಾಲ್ಯಾನ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜ್ಯೋತಿ ರಮೇಶ್‌ ಪ್ರಾರ್ಥಿಸಿ, ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ಅನಂತಕೃಷ್ಣ ಶೆಣೈ ರೆಂಜಾಳ ಸ್ವಾಗತಿಸಿದರು. ಜಿ.ಪಂ. ನಿಕಟಪೂರ್ವ ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು ನಿರೂಪಿಸಿದರು. ಶಂಕರ್‌ ಕುಂದರ್‌ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!