Saturday, January 22, 2022
spot_img
Homeಸ್ಥಳೀಯ ಸುದ್ದಿವಾತ್ಸಲ್ಯದಿಂದ ಕೊರೊನಾ ದೂರ : ಡಾ. ಕಿಶನ್ ಆಳ್ವ

ವಾತ್ಸಲ್ಯದಿಂದ ಕೊರೊನಾ ದೂರ : ಡಾ. ಕಿಶನ್ ಆಳ್ವ

ಮುಂಡ್ಕೂರು : ಮಕ್ಕಳನ್ನು ಕೊರೊನಾದಿಂದ ರಕ್ಷಿಸುವ ನಿಟ್ಟಿನಲ್ಲಿ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಹಮ್ಮಿಕೊಂಡ ವಾತ್ಸಲ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಇದರಿಂದ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ಮೂರನೇ ಅಲೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿದೆ ಎಂದು ಮಕ್ಕಳ ತಜ್ಞ ಡಾ. ಪಿ. ಕಿಶನ್ ಆಳ್ವ ಹೇಳಿದರು.

ಅವರು ಮುಂಡ್ಕೂರಿನ ಶ್ರೀ ದುರ್ಗಾಪರಮೇಶ್ವರೀ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಮುಂಡ್ಕೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲೇ ವಿಶಿಷ್ಠವಾದ ಈ ಕಾರ್ಯಕ್ರಮ ನಾಡಿನಾದ್ಯಂತ ವಿಸ್ತರಿಸಲು ಸರಕಾರ ಮುಂದಾಗುವುದು ಉತ್ತಮವೆಂದು ಅಭಿಪ್ರಾಯಪಟ್ಟ ಡಾ. ಕಿಶನ್‌ ಆಳ್ವ ಅವರು ಕಾರ್ಕಳ ಶಾಸಕರ ಈ ಪ್ರಯತ್ನಕ್ಕೆ ತನ್ನಿಂದಾದ ಸಹಕಾರ ನೀಡುವುದಾಗಿ ತಿಳಿಸಿದರು.


ಬೆಳ್ಮಣ್ ಕ್ಷೇತ್ರದ ನಿಕಟಪೂರ್ವ ಜಿ.ಪಂ. ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಅಂಗನವಾಡಿ ಪುಟಾಣಿಗಳಿಗೆ ಪೌಷ್ಟಿಕಾಂಶಗಳ ಕಿಟ್ ವಿತರಿಸಲಾಯಿತು. ವಾತ್ಸಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಉಪಯುಕ್ತ ವಸ್ತುಗಳನ್ನೊಳಗೊಂಡ ವಿಶೇಷ ಕಿಟ್‍ಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಹೆಚ್. ಶೆಟ್ಟಿ ಮುಲ್ಲಡ್ಕ ಪರಾರಿ ವಿತರಿಸಿದರು. ಕಾರ್ಕಳ ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಘುವೀರ್ ಶೆಣೈ ಪ್ರಸ್ತಾವನೆಗೈದರು. ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸತೀಶ್ ರಾವ್ ಕೊರೋನಾ ತಡೆಗಟ್ಟುವಿಕೆ ಮತ್ತು ಲಸಿಕಾ ಕಾರ್ಯಕ್ರಮದ ಮಾಹಿತಿ ನೀಡಿದರು.
ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ವೈದ್ಯಾಧಿಕಾರಿ ಡಾ. ಸ್ಮಿತಾ, ಕಾರ್ಕಳ ಸರಕಾರಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸೌಜನ್ಯಾ, ಶಿಕ್ಷಣ ಸಂಯೋಜಕ ಚಂದ್ರಕಾಂತ ಡೇಸಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಂಡ್ಕೂರು ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲಾಬಾಬು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಂಡ್ಕೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭಾಸ್ಕರ ಎಂ. ಶೆಟ್ಟಿ ಸ್ವಾಗತಿಸಿ, ಮುಂಡ್ಕೂರು ವಿ.ಎಸ್.ಎಸ್.ಎನ್. ಇದರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅರುಣ್‍ ಕುಮಾರ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಪಂಚಾಯತ್ ಸದಸ್ಯ ಎಂ. ದೇವಪ್ಪ ಸಪಳಿಗ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!