ಆಟವಾಡುವಾಗ ಬಾವಿಗೆ ಬಿದ್ದ ಮಕ್ಕಳು : ರಕ್ಷಣೆಗೆ ಮುಂದಾದ ತಾಯಿ ಸೇರಿ ಮಕ್ಕಳ ದುರ್ಮರಣ

ತುಮಕೂರು : ಆಟವಾಡುತ್ತಿದ್ದ ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ. ಈ ವೇಳೆ ಮಕ್ಕಳ ರಕ್ಷಣೆಗೆ ಬಾವಿಗೆ ಹಾರಿದ್ದ ತಾಯಿ ಹಾಗೂ ಮಕ್ಕಳು ಜಲ ಸಮಾಧಿಯಾದ ಘಟನೆ ತುಮಕೂರಿ ನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಕೋರ ಪಾಳ್ಯ ಸಮೀಪದ ನಿವಾಸಿಯಾಗಿರುವ ಹೇಮಲತಾ, ಮಕ್ಕಳಾದ ಪೂರ್ವಿಕ ಹಾಗೂ ಮಾನಸ ಎಂಬವರೇ ಸಾವನ್ನಪ್ಪಿದ ದುರ್ದೈವಿಗಳು. ಮೂರು ವರ್ಷದ ಪೂರ್ವಿಕ ಆಟವಾಡು ತ್ತಿದ್ದಾಗ ತೆರೆದ ಬಾವಿಗೆ ಬಿದ್ದಿದ್ದಾಳೆ. ಈ ವೇಳೆಯಲ್ಲಿ ಮಾನಸ ಕೂಡ ಪೂರ್ವಿಕ ರಕ್ಷಣೆಗಾಗಿ ಬಾವಿಗೆ ಹಾರಿದ್ದಾಳೆ.

ಮಕ್ಕಳಿಬ್ಬರೂ ಬಾವಿಗೆ ಬಿದ್ದಿರುವುದನ್ನು ಗಮನಿಸಿದ ತಾಯಿ ಮಕ್ಕಳ ರಕ್ಷಣೆಗಾಗಿ ಬಾವಿಗೆ ಹಾರಿದ್ದಾಳೆ.  ಆದರೆ ಮೂವರಿಗೂ ಕೂಡ ಈಜುಗೊತ್ತಿಲ್ಲ. ಹೀಗಾಗಿ ಮೂವರು ಕೂಡ ಬದುಕಿ ಬರಲಿಲ್ಲ. ಈ ಕುರಿತು ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















































































error: Content is protected !!
Scroll to Top