ಕಾರ್ಕಳ : ಸಾಪ್ಟ್ ಕರ್ನಾಟಕ ಯೋಜನೆಯಡಿಯಲ್ಲಿ ಕರ್ನಾಟಕ ಎಲ್ಎಮ್ಎಸ್, ಐಸಿಟಿ ತರಗತಿಗಳ ಉದ್ಘಾಟನೆ ಹಾಗೂ ಟ್ಯಾಬ್ ಹಂಚಿಕೆ ಕಾರ್ಯಕ್ರಮ ಜೂ. 23ರಂದು ಎಂಪಿಎಂ ಕಾಲೇಜಿನಲ್ಲಿ ನಡೆಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ, ಯುವ ಉದ್ಯಮಿ ಸುರೇಶ್ ಅತ್ತೂರು ದೀಪ ಬೆಳಗಿಸಿ, ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಸಮಯದಲ್ಲಿ ಆನ್ಲೈನ್ ತರಗತಿ ದೃಷ್ಟಿಯಿಂದ ಟ್ಯಾಬ್ ವಿತರಣೆ ಮಾಡುತ್ತಿರುವುದು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ ಎಂದರು. ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಎಂ. ಅಧ್ಯಕ್ಷತೆ ವಹಿಸಿದ್ದರು.
ಪ್ರಥಮ ಬಿ.ಕಾಂ.ನ ಅನಿಷಾ ಪ್ರಾರ್ಥಿಸಿದರು. ಐಟಿ ಸಂಚಾಲಕ ವೆಂಕಟೇಶ ಸ್ವಾಗತಿಸಿದರು. ಆಂಗ್ಲಭಾಷೆ ಸಹಾಯಕ ಪ್ರಾಧ್ಯಾಪಕ ಯೋಗೆಶ್ ಡಿ.ಹೆಚ್., ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಮೂರ್ತಿವೈದ್ಯ ನಿರೂಪಿಸಿದರು. ಐಕ್ಯೂಎಸಿ ಸಂಚಾಲಕಿ ಜ್ಯೋತಿ ಎಲ್. ಜನ್ನೆ ವಂದಿಸಿದರು.
ಎಂಪಿಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ
Recent Comments
ಕಗ್ಗದ ಸಂದೇಶ
on