ಕಾರ್ಕಳ : ಉಡುಪಿ ಜಿಲ್ಲೆಯಲ್ಲಿಂದು ಜೂ. 24ರಂದು 123 ಕೊರೊನಾ ಪಾಸಿಟಿವ್ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 45, ಕುಂದಾಪುರ 50, ಕಾರ್ಕಳ 24, ಹೊರ ಜಿಲ್ಲೆಯ ನಾಲ್ವರಲ್ಲಿ ಪಾಸಿಟಿವ್ ದೃಢಪಟ್ಟಿದೆ.
ಉಡುಪಿ ಜಿಲ್ಲೆಯಲ್ಲಿಂದು 7 ಸಾವು
ಉಡುಪಿ ತಾಲೂಕಿನ 69, 77 ಹಾಗೂ 52 ವರ್ಷದ ಮಹಿಳೆ, 57 ವರ್ಷದ ವ್ಯಕ್ತಿ, ಕುಂದಾಪುರ ತಾಲೂಕಿನ 70 ವರ್ಷದ ವ್ಯಕ್ತಿ, ಕಾರ್ಕಳ ತಾಲೂಕಿನ 67 ಹಾಗೂ 75 ವರ್ಷದ ಮಹಿಳೆ ಕೊರೊನಾಗೆ ಮೃತಪಟ್ಟಿರುತ್ತಾರೆ.









































