ಗುರುವಂದನೆ ಜಾಗೃತ ಸಮಾಜದ ಪ್ರತೀಕ – ಡಾ. ಮಂಜುನಾಥ್ ಕೋಟ್ಯಾನ್

ಕಾರ್ಕಳ : ಒಬ್ಬ ಪ್ರಭಾವಿ ಶಿಕ್ಷಕ ತನ್ನ ಜ್ಞಾನದ ಬೆಳಕನ್ನು ನೀಡಿ ಶ್ರೇಷ್ಠ ಸಮಾಜವನ್ನು ನಿರ್ಮಾಣ ಮಾಡುತ್ತಾನೆ. ಸಮಾಜಕ್ಕಾಗಿ ಶ್ರಮಿಸುತ್ತಿರುವ ಶಿಕ್ಷಕರಿಗೆ ಗುರುವಂದನೆ ಸಲ್ಲಿಸುವುದು ಜಾಗೃತ ಸಮಾಜದ ಪ್ರತೀಕವೆಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೋಟ್ಯಾನ್ ಹೇಳಿದರು.
ಅವರು ಕಾರ್ಕಳದ ಪ್ರಕಾಶ್ ಹೊಟೇಲಿನ ಸಂಭ್ರಮ ಸಭಾಂಗಣದಲ್ಲಿ ಭಾನುವಾರ ಉಡುಪಿ ವೈಕುಂಠ ಬಾಳಿಗ ಕಾನೂನು ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಪ್ರಕಾಶ್ ಕಣಿವೆ ಮತ್ತು ನಿವೃತ್ತ ಸಹ ಪ್ರಾಧ್ಯಾಪಕ ಪ್ರೊ. ರೋಹಿತ್ ಅಮೀನ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ, ಡಾ. ಪ್ರಕಾಶ್ ಕಣಿವೆ ವಿದ್ಯಾರ್ಥಿಗಳೇ ಸಂಸ್ಥೆಯ ನಿಜವಾದ ಆಸ್ತಿ. ನಾನು ನನ್ನ 31 ವರ್ಷಗಳ ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಬೆಳೆದಿದ್ದೇನೆ. ವಿದ್ಯಾರ್ಥಿಗಳು ಸೇರಿ ಮಾಡಿದ ಈ ಸನ್ಮಾನ ಸ್ವೀಕರಿಸಿ ಮನಸ್ಸು ತುಂಬಿ ಬಂದಿದೆ ಎಂದರು. ಪ್ರೊ. ರೋಹಿತ್ ಅಮೀನ್ ಮಾತನಾಡಿ, ನಾನು ಅಧ್ಯಾಪಕ ಆಗುವ ಆಸಕ್ತಿಯಿಂದ ಈ ಹುದ್ದೆಗೆ ಬಂದವನಲ್ಲ. ಆದರೆ, ವೃತ್ತಿಗೆ ಬಂದ ನಂತರ ವೃತ್ತಿಯನ್ನು ಪ್ರೀತಿಸಿದೆ. ಇಂದು ಯಾವುದೇ ವಿಷಾದ ಇಲ್ಲದೆ ನಿವೃತ್ತಿ ಹೊಂದಿದ್ದೇನೆ ಎಂದರು. ಕಾರ್ಕಳ ವಕೀಲರ ಸಂಘದ ಅಧ್ಯಕ್ಷ ಸನತ್ ಕುಮಾರ್ ಜೈನ್, ಕಾರ್ಕಳ ಭೂನ್ಯಾಯ ಮಂಡಳಿ ಸದಸ್ಯ ರವೀಂದ್ರ ಮೊಯ್ಲಿ, ವೈಕುಂಠ ಬಾಳಿಗ ಕಾನೂನು ವಿದ್ಯಾಲಯದ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ್ ಪಿ.ಎಸ್. ಅಭಿನಂದನಾ ಮಾತುಗಳನ್ನಾಡಿದರು. ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಪತ್ ಕುಮಾರ್ ಜೈನ್ ಸ್ವಾಗತಿಸಿ, ಶಿಕ್ಷಕ ರಾಜೇಂದ್ರ ಭಟ್‌ ಕೆ. ಕಾರ್ಯಕ್ರಮ ನಿರೂಪಿಸಿದರು. ಸದಾನಂದ ವಂದಿಸಿದರು.























































error: Content is protected !!
Scroll to Top