ಕಾರ್ಕಳ : ಮುಂಡ್ಲಿ ಗ್ರಾಮದ ರುದ್ರಯ ಆಚಾರ್ಯ (45) ಎಂಬವರು ಡಿ. 21ರ ಮಧ್ಯಾಹ್ನ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅರಣ್ಯ ಇಲಾಖೆಗೊಳಪಟ್ಟ ಪ್ರದೇಶದಲ್ಲಿ ರಾಂಪತ್ರೆ ಕೊಯ್ಯುತ್ತಿದ್ದ ಸಂದರ್ಭ ದುರಂತ ಸಂಭವಿಸಿದ್ದು, ರುದ್ರಯ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಇರ್ವರು ಪುತ್ರರನ್ನು ಅಗಲಿದ್ದಾರೆ.
ಮತ್ತೊಂದು ದುರಂತ
ಡಿ. 20ರಂದು ಸ್ನಾನ ಮಾಡಲೆಂದು ಮುಂಡ್ಲಿ ಜಲಾಶಯಕ್ಕೆ ತೆರಳಿದ್ದ ವೇಣೂರು ಪಡ್ಯನಡ್ಕ ನಿವಾಸಿ ಕಿರಣ್ ಎಂಬವರು ನೀರಿಗೆ ಜಾರಿ ಅಸುನೀಗಿದ್ದರು. ಇದೀಗ ಸೋಮವಾರ ಮತ್ತೊಂದು ಅವಘಡ ನಡೆದಿರುವುದು ಮುಂಡ್ಲಿ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.




























