ಕಾರ್ಕಳ : ಕಾರ್ಕಳದ ಅಶ್ವಿನ್ ಎಂ. ರಾವ್ ಅವರಿಗೆ ಭಾರತೀಯ ನೌಕಾಪಡೆಯ ಸಿಎನ್ಎಸ್ (ಚೀಫ್ ಕಮಾಂಡರ್ ಆಫ್ ನೇವಲ್ ಸ್ಟಾಪ್) ಪ್ರಶಸ್ತಿ ದೊರೆತಿದೆ. 15 ವರ್ಷಗಳ ಹಿಂದೆ ಭಾರತೀಯ ನೌಕಾಪಡೆಗೆ ಸೇರಿರುವ ಅಶ್ವಿನ್ ಪ್ರಸ್ತುತ ಕೇರಳದ ಕೊಚ್ಚಿಯಲ್ಲಿ ಕಮಾಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಶ್ವಿನ್ ಸೇವೆಯನ್ನು ಗುರುತಿಸಿ ಇಲಾಖೆ ಡಿ. 15ರಂದು ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ಶ್ರೀ ಭುವನೆಂದ್ರ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕ ಮನೋಹರ ರಾವ್ ಹಾಗೂ ತೆಳ್ಳಾರು ಸರಕಾರಿ ಪ್ರೌಢಶಾಲಾ ನಿವೃತ್ತ ಮುಖ್ಯಶಿಕ್ಷಕಿ ಸಾವಿತ್ರಿ ಮನೋಹರ್ ಅವರ ಪುತ್ರ.
ವಿದ್ಯಾಭ್ಯಾಸ
ಅಶ್ವಿನ್ ಅವರು ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕನ್ನಡ ಪ್ರಾಥಮಿಕ ಶಾಲೆ ಪೆರ್ವಾಜೆ, ಪ್ರೌಢಶಿಕ್ಷಣವನ್ನು ಶ್ರೀ ಭುವನೇಂದ್ರ ಪ್ರೌಢಶಾಲೆ, ಬಿಇ ಪದವಿಯನ್ನು ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಪೂರೈಸಿರುತ್ತಾರೆ. ಏರೋನಾಟಿಕ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಈ ಮೂರು ವಿಷಯದಲ್ಲಿ ಅಶ್ವಿನ್ ಅವರು ಸ್ನಾನಕೋತ್ತರ ಪದವಿ ಪಡೆದಿರುತ್ತಾರೆ.








































