ಅಡಿಲೇಡ್ ಟೆಸ್ಟ್ – ಭಾರತಕ್ಕೆ ಹೀನಾಯ ಸೋಲು.

ಯಾರೂ ಈ ಸೋಲು ನಿರೀಕ್ಷೆ ಮಾಡಿರಲಿಲ್ಲ. ಮೊದಲ ಇನ್ನಿಂಗ್ಸ್ 51 ರನ್ ಲೀಡ್ ಗಳಿಸಿದ ಭಾರತ ಮೂರನೇ ದಿನವೇ 36 ರನ್ನಿಗೆ ಆಲ್ ಔಟ್ ಆಯಿತು. ವಿರಾಟ್ ಕೊಹ್ಲಿ ಸಹಿತ ಯಾವೊಬ್ಬ ಆಟಗಾರರೂ ಎರಡಂಕಿ ತಲುಪಲೇ ಇಲ್ಲ. ಹಾಜೆಲ್ ವುಡ್ ಎಂಟು ರನ್ನಿಗೆ ಐದು ವಿಕೆಟ್ ಊರುಳಿಸಿದರೆ ಪ್ಯಾಟ್
ಕುಮ್ಮಿನ್ಸ್ 21 ರನ್ನಿಗೆ ನಾಲ್ಕು ವಿಕೆಟ್ ಪಡೆದರು. ಭಾರತ ಕೇವಲ 36 ರನ್ನಿಗೇ ಎಲ್ಲಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 87 ರನ್ನಿನ ಸುಲಭ ಟಾರ್ಗೆಟ್ ಪಡೆದ ಆಸ್ಟ್ರೇಲಿಯಾ ಎರಡೇ ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತು. ಪ್ರಥಮ ಇನ್ನಿಂಗ್ಸ್ ನಲ್ಲಿ 73 ಸ್ಕೋರ್ ಮಾಡಿದ ಆಸ್ಟ್ರೇಲಿಯಾ ಕ್ಯಾಪ್ಟನ್ ಟೀಂ ಪೈನ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ಮುಂದಿನ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ತಂಡದಲ್ಲಿ ಇರುವುದಿಲ್ಲ.















































































error: Content is protected !!
Scroll to Top