ಕಾರ್ಕಳ : ಕುಕ್ಕುಂದೂರು ಗ್ರಾಮದ ಮೇಲ್ ಜಡ್ಡು ಬಳಿ ಹಾದು ಹೋಗುವ ಕಾರ್ಕಳ–ಹಿರಿಯಡ್ಕ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಕಾರು (KA20N471) ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದ ಘಟನೆ ನ. 15ರಂದು ನಡೆದಿದೆ. ಪರಿಣಾಮ ಕಾರು ಜಖಂಗೊಂಡಿದ್ದು, ಕಾರು ಚಾಲಕ ಮರುಸ್ವಾಮಿ, ಪ್ರಯಾಣಿಕರಾಗಿದ್ದ ಪೂಮಣಿ ಹಾಗೂ ಜಯಲಕ್ಷ್ಮೀ ಎಂಬವರಿಗೆ ಗಾಯವಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಕ್ಕುಂದೂರು: ಕಾರು ಮರಕ್ಕೆ ಢಿಕ್ಕಿ-ಮೂವರಿಗೆ ಗಾಯ



















