ಬಹುಮುಖ ಪ್ರತಿಭಾ ಸಂಪನ್ನೆ ಧನುಶ್ರೀ

ಕಾರ್ಕಳ : ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿನಿ ಧನುಶ್ರೀ ಪೈ . ಪಠ್ಯ ಹಾಗೂ ಸಹಪಠ್ಯದಲ್ಲೂ ಉತ್ತಮ ಸಾಧನೆಯ ಸೃಜನಶೀಲತೆಯ ಗುಣಗಳಿಂದ ಎಲ್ಲಾ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾಳೆ.
ಈಕೆಯು ಅವಕಾಶಗಳನ್ನು ವ್ಯರ್ಥ ಮಾಡುವುದಿಲ್ಲ. ವಿಶೇಷವಾಗಿ ಹಲವಾರು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಅದರಲ್ಲಿ ಬುದ್ಧನ ಛದ್ಮವೇಷ ಎಲ್ಲರ ಮೆಚ್ಚುಗೆಗೆ ಪಾತ್ರವಾದುದು ಹೊಸ ದಾಖಲೆ. ಅಲ್ಲದೆ ಲಯನ್ಸ್ ಕ್ಲಬ್ ಕಾರ್ಕಳ, ರೋಟರಿ ಸಂಸ್ಥೆ ಕಾರ್ಕಳ, ಶಾರದಾ ಪೂಜಾ ಸಮಿತಿ ಕಾರ್ಕಳ ಆಯೋಜಿಸಿದ ಸ್ಪರ್ಧೆಗಳಲ್ಲಿ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ರಸಪ್ರಶ್ನೆ, ರಂಗೋಲಿ, ಗಾಯನ, ಕಂಸಾಳೆ ಗೀಗೀ ಪದದಲ್ಲಿ ಭಾಗವಹಿಸಿರುತ್ತಾಳೆ. ಕನ್ನಡ, ಹಿಂದಿ, ಇಂಗ್ಲೀಷ್ ಭಾಷಣ ಮಾಡಬಲ್ಲಳು. ವಸ್ತ್ರ ವಿನ್ಯಾಸ ಸ್ಪರ್ಧೆ, ಸ್ಪೆಲ್ ಬೀ, ಸ್ಮರಣಾ ಶಕ್ತಿ ಸ್ಪರ್ಧೆ, ಡ್ಯಾನ್ಸ್ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾಳೆ.

ಭಾರತ್ ಸ್ಕೌಟ್ಸ್ ಗೈಡ್ಸ್ ನ ಪಟಾಲಂ ತರಬೇತಿ ಹಾಗೂ ತಾಲೂಕು, ಜಿಲ್ಲಾ ಮೇಳಗಳಲ್ಲಿ ಭಾಗವಹಿಸಿರುವಳು. ಆನ್ಲೈನ್ ಕಾರ್ಯಕ್ರಮದಲ್ಲಿ ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಮಾಣ ಪತ್ರ ಪಡೆದಿರುತ್ತಾಳೆ.ಸ್ಕೌಟ್ಸ್ ಗೈಡ್ಸ್ ನವರು ಆಯೋಜಿಸಿದ ದೇಶ ಭಕ್ತಿಗೀತಾ ಗಾಯನ ಸ್ಪರ್ಧೆಯಲ್ಲಿ ತಾಲೂಕು, ಜಿಲ್ಲೆ ಹಾಗೂ ಮೈಸೂರಿನಲ್ಲಿ ಜರುಗಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದು ತಂಡಕ್ಕೆ ಕೀರ್ತಿ ತಂದಿರುತ್ತಾಳೆ. ಕಲಿಕೆಯಲ್ಲೂ ಗರಿಷ್ಠ ಅಂಕ ಪಡೆಯುತ್ತಿದ್ದಾಳೆ. ಸಾಂಸ್ಕೃತಿಕ ತಂಡದ ಓರ್ವ ಖಾಯಂ ಸದಸ್ಯಳಾಗಿ ಗುರುತಿಸಿಕೊಳ್ಳುವ ಈಕೆಯು ಎಲ್ಲಾ ಕಲಾ ಪ್ರತಿಭಾ ಸಂಪನ್ನಳು. ಇದೀಗ ಕಲಿಕೆಯಲ್ಲಿ ಒಳ್ಳೆಯ ಸಾಧನೆ ಮಾಡಲು ಸಿದ್ಧತೆ ಮಾಡುತ್ತಿದ್ದಾಳೆ.
ಈಕೆ ಕಾರ್ಕಳದ ಜಯಂತಿ ನಗರದ ಅಶೋಕ್ ಪೈ ಎಸ್. – ಆಶಾ ಎ. ಪೈ ದಂಪತಿಯ ಪುತ್ರಿ.
ಗಣೇಶ್‌ ಜಾಲ್ಸೂರು , ಭುವನೇಂದ್ರ ಪ್ರೌಢಶಾಲೆ ಕಾರ್ಕಳ (ಪೆನ್‌ ಟೀಂ ಸದಸ್ಯ)







































































error: Content is protected !!
Scroll to Top