ಪ್ರತಿಭೆ ಗುಡಿಸಲಿನಲ್ಲಿ ಹುಟ್ಟುತ್ತದೆ, ಅರಮನೆಯಲ್ಲಿ ಬೆಳಗುತ್ತದೆ ಎನ್ನುವ ಮಾತಿದೆ. ಈ ಮಾತಿಗೆ ಸರಿಯೆನಿಸುವ ವಿಶೇಷ ಪ್ರತಿಭೆ ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ಹತ್ತನೇ ತರಗತಿ ವಿದ್ಯಾರ್ಥಿನಿ ಸುವೀಕ್ಷಾ. ಪ್ರಾಥಮಿಕ ಶಾಲೆಯಿಂದಲೇ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಾಗ ಬಹಳ ಆಸಕ್ತಿಯಿಂದ ಮತ್ತು ಲವಲವಿಕೆಯಿಂದ ಭಾಗವಹಿಸುವ ಪ್ರೀತಿ ಈಕೆಯದು.
ಕಲಿಕೆಯಲ್ಲಿಯೂ ಗರಿಷ್ಠ ಅಂಕಗಳಿಸುವ ಈಕೆಗೆ ಸಹ ಪಠ್ಯಚಟುವಟಿಕೆಗಳು ಅಡೆತಡೆಯಾಗಲಿಲ್ಲ. ಮುಖ್ಯವಾಗಿ ಈಕೆಯಲ್ಲಿ ಎಲ್ಲರನ್ನೂ ಒಂದುಗೂಡಿಸುವ ನಾಯಕತ್ವ ಗುಣವಿದೆ. ಕರ್ತವ್ಯಪ್ರಜ್ಞೆಯ ಪರಿಪೂರ್ಣತೆಯಿದೆ. ಇತರ ಭಾಷೆಗಳಲ್ಲೂ ಒಳ್ಳೆಯ ಹಿಡಿತವಿದೆ. ಕೈಬರಹ ಬಹಳಷ್ಟು ಅಂದವಾಗಿರುವುದು ಇನ್ನೊಂದು ಹೆಗ್ಗಳಿಕೆ.ಈಕೆಯ ಪ್ರತಿಭೆಗೆ ಕೈಗನ್ನಡಿಯಾದ ಸಾಧನೆಗಳು ಅನಾವರಣಗೊಳಿಸಿದರೆ ಹತ್ತು ಹಲವಾರು ಇವೆ. ಹಾಗಾಗಿ ಈಕೆ ಬಹುಮುಖ ಪ್ರತಿಭೆ.
ಕಲಿಕೆಯಲ್ಲಿ ತರಗತಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಕಲಿಕೋತ್ಸವ ಸ್ಪರ್ಧೆಯಲ್ಲಿ ಕನ್ನಡ ಪದ ಓದುವುದು, ಕಿಶೋರ ಯಕ್ಷಗಾನ, ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಪ್ರತಿಭಾ ಕಾರಂಜಿಯಲ್ಲಿ ರಸಪ್ರಶ್ನೆ , ಲಘು ಸಂಗೀತ, ಅಭಿನಯಗೀತೆ, ತುಳು – ಕನ್ನಡ ಕಂಠಪಾಠ, ಖವ್ವಾಲಿ ಸ್ಪರ್ಧೆ, ಕತೆ ಹೇಳುವುದು, ಕನ್ನಡ ಹಿಂದಿ ,ತುಳು ಭಾಷಣ, ಆಶುಭಾಷಣ ,ದೇಶ ಭಕ್ತಿಗೀತೆ ಗಾಯನ, ಭಾವಗೀತೆ ಗಾಯನ,ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾಳೆ. Red Cross ನಡೆಸಿದ ಪರೀಕ್ಷೆಯನ್ನೂ ಬರೆದಿದ್ದಾಳೆ, ಪೋಷಣ್ ಅಭಿಯಾನದ ಭಾಷಣ ಸ್ಪರ್ಧೆಯಲ್ಲಿ ಬಹುಮಾನ, ಸ್ಕೌಟ್ಸ್ ಗೈಡ್ಸ್ ನ ಮೇಳ ಹಾಗೂ ಪಟಲಾಂ ನಾಯಕತ್ವ ತರಬೇತಿಯಲ್ಲಿ ಭಾಗವಹಿಸುವಿಕೆ. ಆಯುರ್ವೇದ ಭೂಷಣ ಎಂ. ವಿ. ಶಾಸ್ತ್ರಿ ಪ್ರೌಢಶಾಲೆ ಇನ್ನಾ ನಡೆಸಿದ ಇಂಡಿಯಾ ಕ್ವಿಜ್ ನಲ್ಲಿ ಭಾಗವಹಿಸುವಿಕೆ ,ರೋಟರಿ ಕ್ಲಬ್ ಕಾರ್ಕಳ ಆಯೋಜಿಸಿದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ, ಸಾಹಿತ್ಯ ವಿಷಯದಲ್ಲೂ ಆಸಕ್ತಿ ಹೊಂದಿದ್ದಾಳೆ. ಕ್ರೀಡೆಯಲ್ಲಿ ಕಬಡ್ಡಿ ಹಾಗೂ ವಾಲಿಬಾಲ್ ತ್ರೋಬಾಲ್ ಆಟಗಾರ್ತಿ.
ಈಕೆ ಸದ್ಭಾವನ ನಗರದ ಬಂಗ್ಲೆಗುಡ್ಡೆಯ ಸಮೀಪದ ಗುಂಡ್ಯ ನಿವಾಸಿ ಸುಭಾಶ್ಚಂದ್ರ -ಸುಮಾ ದಂಪತಿಯ ಸುಪುತ್ರಿ.
ಗಣೇಶ್ ಜಾಲ್ಸೂರು, ಭುವನೇಂದ್ರ ಪ್ರೌಢಶಾಲೆ ಕಾರ್ಕಳ (ಪೆನ್ ಟೀಂ ಸದಸ್ಯ)
ಬಹುಮುಖ ಪ್ರತಿಭೆ ಸುವೀಕ್ಷಾ


































