ಕಾರ್ಕಳ : ಕಾರ್ಕಳ ಪುರಸಭಾ ವ್ಯಾಪ್ತಿಯ ಪುಲ್ಕೇರಿ ಎಂಬಲ್ಲಿ ಟೆಂಪೊವೊಂದು ಡಿವೈಡರ್‌ಗೆ ಢಿಕ್ಕಿ ಹೊಡೆದ ಘಟನೆ ನ. 13ರ ರಾತ್ರಿ ಸಂಭವಿಸಿದೆ. ಕಾಸರಗೋಡಿನ ಟೆಂಪೋ ಹುಬ್ಬಳ್ಳಿ ಸಾಗುತ್ತಿದ್ದ ವೇಳೆ ಪುಲ್ಕೇರಿಯಲ್ಲಿ ಡಿವೈಡರ್‌ಗೆ ಢಿಕ್ಕಿ ಹೊಡಿದಿದ್ದು ಢಿಕ್ಕಿಯ ರಭಸಕ್ಕೆ ಟೆಂಪೋ ಮುಂಭಾಗ ನಜ್ಜುಗುಜ್ಜಾಗಿದೆ. ಟೆಂಪೋದಲ್ಲಿ 10 ಮಂದಿ ಪ್ರಯಾಣಿಕರಿದ್ದರೂ ಅದೃಷ್ಟವಶಾತ್ ಯಾರೊಬ್ಬರಿಗೂ ಗಾಯವಾಗಿಲ್ಲ.




















