ಮಂಗಳೂರು ವಿಮಾನ ನಿಲ್ದಾಣ ನಿರ್ವಹಣೆ ಆದಾನಿ ಗ್ರೂಪ್‌ಗೆ

0

ಮಂಗಳೂರು, ಅ. 31 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶನಿವಾರದಿಂದ ಅದಾನಿ ಕಂಪೆನಿಯ ಸುಪರ್ದಿಗೆ ಬಂದಿದೆ. ಒಟ್ಟು ಮೂರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಕಂಪೆನಿಗೆ ಬಿಟ್ಟು ಕೊಡಲಾಗಿದ್ದು, ಈ ಪೈಕಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಂದು ಅದಾನಿ ಕಾರ್ಯಾಚರಣೆ ಶುರುವಾಗಿದೆ. ಲಕ್ನೊ ಮತ್ತು ಅಹಮದಾಬಾದ್‌ ವಿಮಾನ ನಿಲ್ದಾಣ ಕ್ರಮವಾಗಿ ನ.2 ಮತ್ತು 11ರಂದು ಅದಾನಿ ಗ್ರೂಪ್‌ ತೆಕ್ಕೆ ಸೇರಲಿವೆ.
ವಿಮಾನ ನಿಲ್ದಾಣ ಪ್ರಾಧಿಕಾರ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ ನಿರ್ವಹಣೆಗೆ ಬಿಟ್ಟುಕೊಟ್ಟಿರುವುದನ್ನು ಪ್ರಕಟಿಸಿದೆ.

Previous articleಕನ್ನಡಿಗರ ಅನಾಥ ಪ್ರಜ್ಞೆ ಮತ್ತು ಕೆಲವು ಹಕ್ಕೊತ್ತಾಯಗಳು
Next articleಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : ರಾಷ್ಟ್ರೀಯ ಏಕತಾ ದಿನಾಚರಣೆ

LEAVE A REPLY

Please enter your comment!
Please enter your name here