ಕಾರ್ಕಳ, ಅ. 21: ಕರಾವಳಿಯಲ್ಲಿ ಇಂದು ಅಲ್ಲಲ್ಲಿ ಮಳೆಯಾಗಿದೆ. ಇಡೀ ದಿನ ಬಿಸಿಲು ಮಳೆಯ ಕಣ್ಣಾಮುಚ್ಚಾಲೆ ಆಟವಿತ್ತು. ಬೆಳಗ್ಗೆ ಮೋಡ ಕವಿದಿದ್ದರೆ ಮಧ್ಯಾಹ್ನದ ಹೊತ್ತಿಗೆ ಬಿಸಿಲೇರಿತ್ತು. ಸಂಜೆಯಾಗುತ್ತಿದ್ದಂತೆ ಮಳೆ ಶುರುವಾಯಿತು. ಹೆಬ್ರಿ ಸುತ್ತಮುತ್ತ ಧಾರಾಕಾರ ಮಳೆಯಾದರೆ ಕಾರ್ಕಳದಲ್ಲಿ ಸಾಧಾರಣ ಮಳೆ ಸುರಿಯಿತು. ಹವಾಮಾನ ಇಲಾಖೆ ಮೂರು ದಿನದ ಮಳೆಯ ಎಚ್ಚರಿಕೆ ಕೊಟ್ಟಿದೆ.
ಹೆಬ್ರಿಯಲ್ಲಿ ಭಾರಿ ಮಳೆ


































