ಊಟ ಆದ ತಕ್ಷಣ ಈ ತಪ್ಪುಗಳನ್ನು ಮಾಡಬಾರದು

1

ಊಟ ಆದ ತಕ್ಷಣ ಏನು ಮಾಡಬೇಕು, ಏನು ಮಾಡಬಾರದು ಎಂಬುದು ನಮಗೆ ಸರಿಯಾಗಿ ತಿಳಿದಿರುವುದಿಲ್ಲ. ಕೆಲವೊಮ್ಮೆ ಗೊತ್ತಿದ್ದರೂ ಆ ತಪ್ಪುಗಳನ್ನು ಮಾಡುತ್ತೇವೆ. ಊಟ ಆದ ತಕ್ಷಣ ನಾವು ಮಾಡುವ ತಪ್ಪುಗಳು ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ತಕ್ಷಣ ಬೀರದಿದ್ದರೂ ವಯಸ್ಸಾಗುತ್ತಿದ್ದಂತೆಯೇ ಅನಾರೋಗ್ಯ ಉಂಟಾಗುತ್ತದೆ. ಊಟ ಆದ ತಕ್ಷಣ ಯಾವ ತಪ್ಪುಗಳನ್ನು ಮಾಡಬಾರದು ಎಂಬುದು ಇಲ್ಲಿದೆ.

1. ಮಲಗುವುದು

ಹೊಟ್ಟೆ ತುಂಬುತ್ತಿದ್ದಂತೆಯೆ ನಿದ್ದೆ ಬಂದಂತಾಗುತ್ತದೆ. ಆದರೆ ಎಂದಿಗೂ ಊಟ ಆದ ತಕ್ಷಣ ನಿದ್ದೆ ಮಾಡಬೇಡಿ. ಏಕೆಂದರೆ ನಿದ್ದೆ ಮಾಡಿದರೆ ನಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ನಾವು ಮಲಗಿದ ಭಂಗಿ ಕಡೆ ಆಹಾರ ಹೋಗಿ ಕುಳಿತು ಬಿಡುತ್ತದೆ. ಆಗ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.

2. ನೀರು ಕುಡಿಯುವುದು

ಊಟ ಆದ ತಕ್ಷಣ ನೀರು ಸೇವಿಸಿದರೆ ಜೀರ್ಣಕ್ರಿಯೆಗೆ ಪ್ರಯೋಜನವೇನೂ ಆಗದು, ಬದಲಿಗೆ ಇದು ಜೀರ್ಣರಸಗಳನ್ನು ತಿಳಿಯಾಗಿಸಿ ಇವುಗಳ ಪ್ರಭಾವವನ್ನು ಕುಂದಿಸಬಹುದು. ಅಲ್ಲದೇ ಜೀರ್ಣಾಂಗಗಳಲ್ಲಿ ಕಿಣ್ವಗಳು ಮತ್ತು ಆಮ್ಲಗಳನ್ನು ತಿಳಿಯಾಗಿಸಿ ಆಮ್ಲೀಯತೆಯನ್ನು ಉಂಟುಮಾಡಬಹುದು. ಹಾಗಾಗಿ ನೀರನ್ನು ಕುಡಿಯಬಾರದು.

3. ಹಲ್ಲುಜ್ಜುವುದು

ತುಂಬಾ ಜನ ಊಟ ಆದ ತಕ್ಷಣ ಹಲ್ಲುಜ್ಜುತ್ತಾರೆ. ಆದರೆ ಹೀಗೆ ಹಲ್ಲುಜ್ಜುವುದು ತಪ್ಪು. ನಮಗೆ ಹೊಟ್ಟೆ ತುಂಬಿದ ತಕ್ಷಣ ಲಾಲಾರಸ ಬಿಡುಗಡೆ ಪ್ರಮಾಣ ಹೆಚ್ಚಿರುತ್ತದೆ. ಹಲ್ಲುಜ್ಜಿದರೆ ಲಾಲಾರಸ ಬಿಡುಗಡೆ ಕುಂದುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಆಗುತ್ತದೆ.

4. ಹಣ್ಣು ತಿನ್ನುವುದು

ಹಣ್ಣು ತಿನ್ನುವುದು ಒಳ್ಳೆಯ ಅಭ್ಯಾಸವೇ, ಆದರೆ ಸರಿಯಾದ ಸಮಯಕ್ಕೆ ತಿಂದರೆ ಮಾತ್ರ ಒಳ್ಳೆಯದು. ಊಟ ಆದ ತಕ್ಷಣ ಹಣ್ಣು ತಿಂದರೆ ದೇಹದಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚುತ್ತದೆ. ಹೀಗೆ ಮಾಡಿದರೆ ಎಸಿಡಿಟಿ ಆಗುತ್ತದೆ.

5. ಧೂಮಪಾನ, ಮದ್ಯಪಾನ

ಕೆಲವರಿಗೆ ಊಟ ಆದ ತಕ್ಷಣ ಧೂಮಪಾನ, ಮದ್ಯಪಾನ ಮಾಡುವ ಚಟವಿರುತ್ತದೆ. ಆದರೆ ಇದು ತಪ್ಪು. ಧೂಮಪಾನ, ಮದ್ಯಪಾನವೇ ಆರೋಗ್ಯಕ್ಕೆ ಹಾಳು. ಅದರಲ್ಲಿಯೂ ಊಟದ ಬಳಿಕ ಮಾಡುವುದು ಮತ್ತೂ ಹಾಳು. ಅನ್ನನಾಳ, ಶ್ವಾಸನಾಳ ಮತ್ತು ಜೀರ್ಣಾಂಗಗಳ ಒಳಗೆ ಇಳಿಯುವಾಗ ಒಳಗೋಡೆಗಳಿಗೆ ಪ್ರಚೋದನೆ ನೀಡುತ್ತಾ ಹೋಗುತ್ತವೆ. ಪರಿಣಾಮವಾಗಿ IBS ಅಥವಾ ಹೊಟ್ಟೆಯುರಿ, ಹುಳಿತೇಗು, ಆಮ್ಲೀಯತೆ, ಸೋಂಕು ಮೊದಲಾದವುಗಳನ್ನು ಉಂಟುಮಾಡುತ್ತವೆ.

6. ವ್ಯಾಯಾಮ

ಊಟವಾದ ತಕ್ಷಣ ವ್ಯಾಯಾಮ ಮಾಡಬಾರದು. ದೇಹದ ಯಾವ ಕಸರತ್ತು ಮಾಡಬಾರದು. ತಿಂದ ಆಹಾರ ಜೀರ್ಣವಾದ ಮೇಲೆ ವ್ಯಾಯಾಮ ಮಾಡಿ, ಹೊಟ್ಟೆ ತುಂಬಿದಾಗ ಬಹಳ ಓಡಾಡುವುದು, ನಡೆದಾಡುವುದು, ಸ್ವಿಮ್ಮಿಂಗ್, ಯೋಗ ಇದಾವುದನ್ನೆ ಮಾಡಿದರೂ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಕೃಪೆ : ಜಾಗೃತಿ ಫೌಂಡೇಶನ್ ಕಾರ್ಕಳ---
Previous articleಸೋಲಾರ್ ಘಟಕದ ಕೊಡುಗೆ
Next articleಹೆಬ್ರಿಯಲ್ಲಿ ಭಾರಿ ಮಳೆ

1 COMMENT

  1. ಊಟವಾದ ತಕ್ಷಣ ಮಾಡಬಾರದ ಸಂಗತಿಗಳನ್ನು ತಿಳಿಸಿರುವುದು ಶ್ಲಾಘನೀಯ . ಓದುಗರಿಗೆ ತುಂಬಾ ಉಪಯುಕ್ತ.
    ಧನ್ಯವಾದಗಳು

LEAVE A REPLY

Please enter your comment!
Please enter your name here