ನವರಾತ್ರಿಯ ನಾಲ್ಕನೇ ದಿನ ಪೂಜೆ ಸ್ವೀಕರಿಸುವ ದೇವಿಯ ಅವತಾರವೇ ಕೂಶ್ಮಾಂಡ ದೇವಿ. ಎಂಟು ಭುಜಗಳನ್ನು ಹೊಂದಿರುವ ಕಾರಣ ಈಕೆಯನ್ನು ಅಷ್ಟಭುಜೆ ಎಂದೂ ಕರೆಯುತ್ತಾರೆ. ಈಕೆ ಹುಲಿಯ ಮೇಲೆ ಕುಳಿತವಳು. ಆಕೆಯ ಕೈಯ್ಯಲ್ಲಿ ತಾವರೆ, ಚಕ್ರ, ಬಿಲ್ಲು, ಬಾಣ, ಗದೆ, ಜಪಮಾಲೆ, ಕಮಂಡಲ ಇವುಗಳ ಜೊತೆಗೆ ಅಭಯ ಮುದ್ರೆ ಇರುತ್ತದೆ. ಸೂರ್ಯನ ಶಕ್ತಿಗೆ ಆಕೆ ಕಾರಣ ಎಂಬ ನಂಬಿಕೆ ಇದೆ. ಬೂದುಗುಂಬಳ ಆಕೆಗೆ ತುಂಬಾ ಇಷ್ಟವಾಗಿದೆ.ಈಕೆ ರಕ್ತಕೆಂಪು ವಸ್ತ್ರಧಾರಿಣಿ.
ನವರಾತ್ರಿಯ ನಾಲ್ಕನೇ ದಿನದ ಪೂಜೆ ಕೂಶ್ಮಾಂಡ ದೇವಿಗೆ











