ಮಕ್ಕಳನ್ನು ಆರೋಗ್ಯವಂತರಾಗಿ ಬೆಳೆಸುವಲ್ಲಿ ತಾಯಿ ಪಾತ್ರ ಹಿರಿದಾದುದು

ಕಾರ್ಕಳ : ಮಕ್ಕಳನ್ನು ಆರೋಗ್ಯವಂತರಾಗಿ ಬೆಳೆಸುವಲ್ಲಿ ತಾಯಿಯ ಪಾತ್ರ ಹಿರಿದಾದುದು. ತಾಯಂದಿರು ಪೌಷ್ಠಿಕ ಆಹಾರ ನೀಡುವುದರೊಂದಿಗೆ ಸಕಾಲಕ್ಕೆ ವೈದ್ಯರ, ಆಶಾ ಕಾರ್ಯಕರ್ತೆಯರ ಸಲಹೆ ಪಡೆಯುವುದು ಅಗತ್ಯವೆಂದು ಬೆಳ್ಮಣ್‌ ಲಯನ್ಸ್ ಕ್ಲಬ್ ಅಧ್ಯಕ್ಷ ಗ್ರೆಗೊರಿ ಮಿನೇಜಸ್ ಹೇಳಿದರು. ಅವರು ಅ. 13ರಂದು ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳ್ಮಣ್ ಲಯನ್ಸ್ ವತಿಯಿಂದ ನಡೆದ ಆರೋಗ್ಯವಂತ ಶಿಶು ಸ್ಪರ್ಧೆಯಲ್ಲಿ ಮಾತನಾಡಿದರು. ವೈದ್ಯಾಧಿಕಾರಿ ಡಾ|ಬಿ.ಬಿ. ರಾವ್, ಲಯನ್ಸ್ ಕಾರ್ಯದರ್ಶಿ ವಿ.ಕೆ. ರಾವ್, ಶರತ್, ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

a href="#" target="_blank">







































error: Content is protected !!
Scroll to Top