ವಾರ ಭವಿಷ್ಯ- ಅ. 4ರಿಂದ ಅ.10ರವರೆಗೆ

ಶಾರ್ವರಿ ಸಂವತ್ಸರ: ಅಧಿಕ ಆಶ್ವಯುಜ ಕೃಷ್ಣ ಪಕ್ಷ ಶರದೃತು ದಕ್ಷಿಣಾಯನಂ  

ವಿಶೇಷ ದಿನಗಳು:  4.10.2020… ಮೀನ ರಾಶಿಗೆ  ಕುಜನ ಪ್ರವೇಶ      

5.10.2020  ಸಂಕಷ್ಟ ಚತುರ್ಥಿ   

13.10.2020  ಸರ್ವೈಕಾದಶಿ  

16.10.2020ಅಮಾವಾಸ್ಯೆ

ಮೇಷ

ಮೀನ ರಾಶಿಗೆ ಕುಜ ಬಂದಿರುವುದು ಹಾಗೆಯೇ ಅಷ್ಟಮದಲ್ಲಿ ಕೇತು ಬಂದಿರುವುದು ಭಾಗ್ಯದಲ್ಲಿ ಗುರು ಇರುವುದರಿಂದ ಬರುವ ದೋಷದ ಪ್ರಮಾಣ ಕಡಿಮೆಯಾಗಲಿದೆ. ದುಷ್ಟಗ್ರಹಗಳ ಪೀಡೆಯನ್ನು ಕೇತು ಕೊಡಲಿದ್ದಾನೆ. ಇಲ್ಲಿ ಕುಜನೂ ಅಶುಭ ಫಲವನ್ನೇ ಕೊಡುವವನಾಗಿದ್ದಾನೆ. ಬಂಧುಗಳೊಂದಿಗೆ ಮತ್ತು ತನ್ನವರೊಂದಿಗೆ ವೈಮನಸ್ಸು ಮೂಡಲಿದೆ. ದ್ವಿತೀಯದಲ್ಲಿ ರಾಹು ಕೂಡಾ ಇರುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದೆ. ಎಲ್ಲ ರೀತಿಯಲ್ಲಿಯೂ ಶಾರೀರಿಕವಾಗಿ ಮಾನಸಿಕವಾಗಿ ಆರ್ಥಿಕವಾಗಿ ಜಾಗ್ರತೆಯಿಂದಲೇ ವರ್ತಿಸಬೇಕು.

ವೃಷಭ

  ಕುಜ ಲಾಭ ಕ್ಷೇತ್ರಕ್ಕೆ ಬಂದಿರುವುದು ನಿಮ್ಮ ಪತ್ನಿ ಕಡೆಯಿಂದ ಭೂಮಿ ಲಾಭ ಆರ್ಥಿಕ ಲಾಭ ಬರಲಿದೆ. .ಸಪ್ತಮದ ಕೇತು ನೀವು ಅವರ ಸಹಾಯವನ್ನು ತಿರಸ್ಕರಿಸುವಂತೆ ಮಾಡಲಿದ್ದಾನೆ .ಅಂದರೆ ಹೊಂದಾಣಿಕೆಯ ಕೊರತೆ ಇಲ್ಲಿ ಬರಲಿದೆ. ಅಷ್ಟಮದ ಗುರು ನಿಮ್ಮ ಸರ್ವ ಸುಖವನ್ನು ಕಸಿದುಕೊಳ್ಳುತ್ತಾನೆ .ಕಫ ಪ್ರಕೃತಿ ನಿಮ್ಮಲ್ಲಿ ಇರುತ್ತದೆ .ದೇವ -ಬ್ರಹ್ಮ ದ್ವೇಷಿ ಯನ್ನಾಗಿ ಮಾಡಲಿದ್ದಾನೆ .ಬಡತನ ಅಂದರೆ ಏನು ಎಂಬುದನ್ನೂ ತಿಳಿಸುತ್ತಾನೆ .ಪ್ರತಿನಿತ್ಯ ಓಂ ನಮಹ ಶಿವಾಯ 108 ಬಾರಿ ಹೇಳುತ್ತಾ ಬರಬೇಕು.

ಮಿಥುನ

ರಾಹು ವ್ಯಯಕ್ಕೆ ಮತ್ತು ಕೇತು ಷಷ್ಟಕ್ಕೆ ಬಂದಿದ್ದಾನೆ. ವ್ಯಯದ ರಾಹು ಅನಾರೋಗ್ಯವನ್ನು ತರುತ್ತಾನೆ .ಕಣ್ಣು ಕಾಲುಗಳ ತೊಂದರೆಯನ್ನು ತರುತ್ತಾನೆ .ನಾಗ ದೇವರ ಮೂಲಮಂತ್ರವನ್ನು ಅಥವಾ ನಾಗದೇವರ ಸೇವೆಯನ್ನು /ಪಂಚಮಿ ವೃತವನ್ನು ಮಾಡುತ್ತಾ ಬರಬೇಕು ಕೇತು ಶುಭಫಲವನ್ನು ನೀಡಲಿದ್ದಾನೆ .ನಿಮ್ಮ ಸಹೋದ್ಯೋಗಿಗಳೊಂದಿಗೆ ನಿಮ್ಮ ವರ್ತನೆ ಬಹಳ ನಯವಾಗಿರಲಿ.ಬರುವ ಆದಾಯವೂ ಉತ್ತಮವಾಗಿರುತ್ತದೆ .ಹಿರಿಯರ ಆರೋಗ್ಯದ ಕಡೆಗೆ  ಗಮನ ಹರಿಸುವಂತೆ ಶನಿ ತಿಳಿಸುತ್ತಿದ್ದಾನೆ.

ಕರ್ಕಾಟಕ

ಪಂಚಮಕ್ಕೆ ಕೇತು  ಮತ್ತು ಲಾಭ ಕ್ಷೇತ್ರಕ್ಕೆ ರಾಹುವಿನ ಪ್ರವೇಶವಾಗಿದೆ.  ಪಂಚಮದ ಕೇತು “ಪುತ್ರ ಕ್ಷಯಮ್ ಜಠರ ರೋಗ ಪಿಶಾಚ ಪೀಡಾಮ್ ದುರ್ಭುದ್ಧಿಮ್ ಆತ್ಮನಿ ಖಳ ಪ್ರಕೃತಿಮ್ ಚ ಪಾತ: ” ಎಂದು ಹೇಳಿದ್ದಾರೆ. ನಾವು ಗಣಪತಿ ದೇವರನ್ನು ಪ್ರಾರ್ಥಿಸುತ್ತಾ ಬರಬೇಕು. ರಾಹು ಅನೇಕ ರೀತಿಯಿಂದ ಧನಾದಯವನ್ನು ತರಲಿದ್ದಾನೆ .ಮನೆಯಲ್ಲಿ ಹಿರಿಯರೊಂದಿಗೆ ಶೀತಲ ಯುದ್ಧ ನಡೆಯುತ್ತಿರುತ್ತದೆ .ನಿಮ್ಮ ಸಮಸ್ಯೆಗಳನ್ನು ಸ್ಪಷ್ಟವಾಗಿ ತಿಳಿಸಿ ಪರಿಹರಿಸಿಕೊಳ್ಳಿರಿ .ಆದರೂ ಸರ್ವತೋಮುಖ ಒತ್ತಡ ಬರುವ ಸಾಧ್ಯತೆ ಇದೆ.

ಸಿಂಹ

 ಸುಖ ಸ್ಥಾನಕ್ಕೆ ಕೇತು ಕರ್ಮ ಕ್ಷೇತ್ರಕ್ಕೆ ರಾಹುವಿನ ಪ್ರವೇಶ ವಾಗಿದೆ. ಆತ್ಮವಿಶ್ವಾಸ ಬೆಳಿಸಿಕೊಳ್ಳಿರಿ.ಯಾಕೆಂದರೆ ಉತ್ತಮ ದೈವಾನುಗ್ರಹ  ನಿಮಗಿದೆ. ಅನೇಕ ಮೂಲಗಳಿಂದ ಧನಾದಾಯ ವಾಗಲಿದೆ. ನಿಮ್ಮ ಅತಿಯಾದ ಸಮಸ್ಯೆಯೆಂದರೆ ನಿಮ್ಮ ಹಿತ ಶತ್ರುಗಳು.ಈ ವಿಷಯ ನಿಮಗೆ ಗೊತ್ತಿದ್ದರೂ ನೀವು ಅದನ್ನು ಗಮನಿಸುವುದೇ ಇಲ್ಲ .ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳಿರಿ ಬೆಳೆಸಿಕೊಳ್ಳಿರಿ . ಪ್ರಣಯ ಪ್ರಸಂಗಗಳಲ್ಲಿ ಅಡೆತಡೆಗಳು ಬರಲಿವೆ. ದೇವಿ ಪಾರಾಯಣ ಮಾಡುತ್ತಾ ಬರಬೇಕು.

ಕನ್ಯಾ

ತೃತೀಯಕ್ಕೆ ಕೇತುವಿನ ಆಗಮನವಾಗಿದೆ, ಭಾಗ್ಯಕ್ಕೆ ರಾಹುವಿನ ಆಗಮನವಾಗಿದೆ .ಕೇತು ಶತ್ರುನಾಶಕ .ಧನ ಭೋಗಗಳು ಉಳ್ಳವರು ಆಗುವಿರಿ ರಾಹುವೆಂದರೆ ಸರ್ಪ. ಸರ್ಪನ  ಗುಣ ನುಸುಳಿ ಹೋಗುವಂತಹ  ಜಾಣ್ಮೆ ಪ್ರಭಾವಿ ವ್ಯಕ್ತಿಗಳ ಹಿಂದೆ ಕೆಲಸ ಮಾಡುತ್ತದೆ. ಆಪ್ತರ ಹಿತಚಿಂತಕರ ಸಂಬಂಧ  ಒಳ್ಳೆಯ ಫಲವನ್ನು ಕೊಡಲಿದೆ.  ಭಾಗ್ಯದ ರಾಹು ತಂದೆ ತಾಯಿಯವರೊಂದಿಗೆ ಕಲಹವನ್ನು ತರುತ್ತಾನೆ.  ನಾಗ ದೇವರ ಸೇವೆಯನ್ನು ಮಾಡುತ್ತಾ ಸಂಬಂಧ ಹಳಸಿಹೋಗದಂತೆ ಜಾಗ್ರತೆ ವಹಿಸಬೇಕು.

ತುಲಾ

ನವಗ್ರಹರೆಲ್ಲರೂ ಪ್ರತಿಕೂಲ ಸ್ಥಿತಿಯಲ್ಲಿ ಇರುವುದರಿಂದ ಪ್ರತಿನಿತ್ಯ ನವಗ್ರಹ ಸ್ತೋತ್ರ ಪಠಿಸುತ್ತಾ ಬರಬೇಕು. ಯಾವುದೇ ವ್ಯವಹಾರ ಮಾಡುವಾಗ ಬಹಳ ಎಚ್ಚರದಿಂದ  ವ್ಯವಹರಿಸಬೇಕು. ಸಮಾಧಾನದಿಂದ  ವ್ಯವಹರಿಸಬೇಕು.  ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರರದಿಂದ ವ್ಯವಹರಿಸಬೇಕು .ಯಾರಿಗೂ ನೀವು ಜಾಮೀನು ನಿಲ್ಲಬೇಡಿ  ಸಾಲ ಕೊಡಬೇಡಿ .ಅವಿವಾಹಿತರಿಗೆ  ವಿವಾಹ ಸಂಬಂಧ ಕೂಡಿ ಬಂದಾಗ ಜಾತಕ ಹೊಂದಾಣಿಕೆ ಮಾಡಿಕೊಂಡೇ ಮುಂದುವರಿಯಬೇಕು.

ವೃಶ್ಚಿಕ

 ಜನ್ಮದಲ್ಲಿ ಕೇತು , ಸಪ್ತಮದಲ್ಲಿ ರಾಹು ; ಪಂಚಮದಲ್ಲಿ ಕುಜ  ಇರುವುದನ್ನು ನೀವು ಗಮನಿಸಿರಿ. ಗುರು ಬಲ ನಿಮಗಿರುವುದು ಒಂದು ಸಮಾಧಾನದ ವಿಷಯ ,ಆದರೂ ಆರೋಗ್ಯದಲ್ಲಿ ಸ್ವಲ್ಪ ಏರಿಳಿತ ಕಂಡು ಬರಲಿದೆ , ರವಿ ಲಾಭ ಕ್ಷೇತ್ರದಲ್ಲಿ ಇರುವುದರಿಂದ ಬರುವ ಧನಾಧಾಯ ಉತ್ತಮವಿರುತ್ತದೆ.  ರಾಜಕೀಯ ವ್ಯಕ್ತಿಗಳಿಗೆ  ಉತ್ತಮ ಅವಕಾಶ ಉಂಟಾಗಲಿದೆ . ಹಣದ ಬಗ್ಗೆ ಬಹಳ ಎಚ್ಚರವಹಿಸಬೇಕು. ಬುಧ ಚಂಚಲತೆಯನ್ನು ನೀಡಲಿದ್ದಾನೆ.  ವಿದ್ಯಾರ್ಥಿಗಳು ಯಶಸ್ವಿಯಾಗಲಿದ್ದಾರೆ.

ಧನು

ನಿಮ್ಮ ಸಮಯ ಅತಿ ಉದ್ವೇಗಕಾರಿಯಾಗಿದೆ . ಸುಖ ಸ್ಥಾನದಲ್ಲಿ ಕುಜನ ಪ್ರವೇಶವಾಗುತ್ತಿದೆ.  ಸುಖ ಸ್ಥಾನದಲ್ಲಿ ಕುಜನಿರುವಾಗ ಬಂಧು ಮಿತ್ರ ಮಾತೃ ಭೂಮಿ ಗೃಹ ವಾಹನಗಳು ಇರದವನು ಅಥವಾ ಇವುಗಳಿಂದ ಸಮಸ್ಯೆಗಳನ್ನು ಎದುರಿಸುವವನಾಗಿರುತ್ತೀರಿ. ಮನೆಯ ವಿಷಯದಲ್ಲಿ ಭೂಮಿಯ ವಿಷಯದಲ್ಲಿ ಕಲಹ ಬರದಂತೆ ಎಚ್ಚರ ವಹಿಸಬೇಕು.ಧೈರ್ಯದಿಂದ ಮುನ್ನಡೆಯಿರಿ .ಸಾಂಸಾರಿಕವಾಗಿ ಪತ್ನಿ ನಿಮಗೆ ಬಹಳ ಸಹಕಾರವನ್ನು ನೀಡಲಿದ್ದಾರೆ.ಗೃಹ ಬದಲಾವಣೆ ಭೂಮಿ ಖರೀದಿ ನಡೆಸಲಿರುವ ಸಮಯವಾಗಿದೆ.ವೃತ್ತಿ ರಂಗದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಹಳ ಉಪಾಯದಿಂದ ಎದುರಿಸಬೇಕು.

ಮಕರ

ನವೆಂಬರ್ 20 ರವರೆಗೆ ಗುರುಬಲವಿಲ್ಲ. ಶನಿ ಜನ್ಮದಲ್ಲಿ ಇದ್ದಾನೆ .ಪಂಚಮದಲ್ಲಿ ರಾಹು ಇದ್ದಾನೆ ಅಷ್ಟಮದಲ್ಲಿ ಶುಕ್ರನಿದ್ದಾನೆ  ಲಾಭ ಕ್ಷೇತ್ರದಲ್ಲಿ ಕೇತು ಇದ್ದಾನೆ .ಮಿಶ್ರ ಫಲವನ್ನು ಅನುಭವಿಸಲಿದ್ದೀರಿ.ಮಕ್ಕಳ ಆರೋಗ್ಯದ ಕಡೆಗೆ ,ಅವರ ಚಂಚಲ ಮನಸ್ಸಿನ ಬಗ್ಗೆ ಸದಾ ಗಮನಹರಿಸಬೇಕು. ಮನೆಯಲ್ಲಿ ಪತ್ನಿಯೊಂದಿಗೆ ವಿಶ್ವಾಸದಿಂದ ಮುನ್ನಡೆಯಿರಿ.ಸಾಮಾಜಿಕವಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು.  ತಂದೆ ತಾಯಿಯವರ ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ.

ಕುಂಭ

ಗುರು ಲಾಭ ಕ್ಷೇತ್ರದಲ್ಲಿ ಇರುವುದರಿಂದ ಬರುವ ಆದಾಯವೂ ಬಹಳ ಉತ್ತಮವಿರುತ್ತದೆ. ಆದರೆ ಶನಿ ವ್ಯಯದಲ್ಲಿ ಇರುವುದರಿಂದ ವ್ಯರ್ಥ ಖರ್ಚು ಕೂಡಾ ಅಧಿಕವಾಗಿರುತ್ತದೆ .ದ್ವಿತೀಯದಲ್ಲಿ ಕುಜ ಇರುವುದರಿಂದ ನಿಮ್ಮ ಮಾತಿನಲ್ಲಿ ಮೃದುತ್ವ ಇರಲಿ , ನಿಮ್ಮ ಗೆಳೆಯರೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಳ್ಳಿರಿ,ನಿಮ್ಮ ದುಡುಕಿಗೆ ಉದ್ವೇಗಕ್ಕೆ ಆದಷ್ಟು ವಿರಾಮವನ್ನು ನೀಡಬೇಕು. ನೌಕರರು ತಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ  ಯನ್ನು ಬೆಳೆಸಿಕೊಳ್ಳಿರಿ .ಮಕ್ಕಳೊಂದಿಗೆ ಸ್ನೇಹಪರತೆಯನ್ನು ಬೆಳೆಸಿಕೊಳ್ಳಿರಿ .

ಮೀನ

 ನಿಮ್ಮ ಅತಿಯಾದ ಒತ್ತಡದಿಂದ ಮಾನಸಿಕ ಖಿನ್ನತೆ ಬರಲಿದೆ. ಬಳಲಿಕೆ ಬರಲಿದೆ. ನಿಮಗೆ ವಿಶ್ರಾಂತಿ ಖಂಡಿತಾ ಬೇಕು . ನಿಮ್ಮ ಕಾರ್ಯ ವೈಖರಿಗೆ ಎಲ್ಲರೂ ಮೆಚ್ಚಲಿದ್ದಾರೆ .ನಿಮ್ಮ ಕೋಪದಿಂದ ಎಲ್ಲ ಕೆಲಸ ಹಾಳಾಗಲಿದೆ. ಅಸಹನೆ ನಿಮ್ಮಲ್ಲಿ ಬೆಳೆಯುತ್ತಲೇ ಹೋಗುತ್ತದೆ. ಸಧ್ಯದಲ್ಲಿ ನಿಮ್ಮ ಕೆಲಸಗಳೆಲ್ಲವೂ ಕೈಗೂಡಲಿದ್ದು ಯಶಸ್ವೀ ಜೀವನ ನಡೆಸಲಿದ್ದೀರಿ . ಅಷ್ಟಮದಲ್ಲಿ ಬುಧನಿದ್ದಾನೆ ಶಿಲ್ಪ ಕಲೆಯಲ್ಲಿ ಪರಿಣತ ರಾಗುವಿರಿ ಹಾಸ್ಯ ಪ್ರಿಯರು ಬುದ್ಧಿವಂತರಾಗುವಿರಿ.

ಜ್ಯೋತಿಷ್ಯರು

ಕೆ.ಸುಬ್ರಹ್ಮಣ್ಯ ಆಚಾರ್ಯ

ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ

ಹಿರಿಯಂಗಡಿ, ಕಾರ್ಕಳ

ಸಂಪರ್ಕ : 97414 89529/ 80739 73603



































































































error: Content is protected !!
Scroll to Top