ವರಿಷ್ಠರ ಸಂದೇಶ ಬಂದ ಬಳಿಕ ಸಂಪುಟ ವಿಸ್ತರಣೆ : ಯಡಿಯೂರಪ್ಪ

ಬೆಂಗಳೂರು, ಸೆ. 21 : ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಇನ್ನೂ ಪಕ್ಕಾ ನಿರ್ಧಾರ ಆಗಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಪಕ್ಷದ ವರಿಷ್ಠರ ಸಂದೇಶ ಬಳಿಕವಷ್ಟೇ ವಿಸ್ತರಣೆಯಾಗಲಿದೆ ಎನ್ನುವ ಮೂಲಕ ಸದ್ಯಕ್ಕೆ ವಿಸ್ತರಣೆ ಸಾಧ್ಯವಿಲ್ಲ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಸಂಪುಟ ವಿಸ್ತರಣೆ ಕುರಿತಂತೆ ದಿಲ್ಲಿಯಲ್ಲಿ ವರಿಷ್ಠ ನಾಯಕರ ಜೊತೆಗೆ ಚರ್ಚೆ ನಡೆದಿದೆ. ವರಿಷ್ಠರಿಂದ ಸಂದೇಶ ಬಳಿಕವಷ್ಟೇ ವಿಸ್ತರಣೆಯಾಗಲಿದೆ. ನಾವು ಸಂದೇಶವನ್ನು ಕಾಯುತ್ತಿದ್ದೇವೆ  ಎಂದು ಯಡಿಯೂರಪ್ಪ ಹೇಳಿದ್ದಾರೆ.











































error: Content is protected !!
Scroll to Top