ರೆಂಜಾಳ : ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆಯಲ್ಲೇ ಹರಿಯುತ್ತಿದೆ ನೀರು

ರೆಂಜಾಳ, ಸೆ.12: ಸಮರ್ಪಕ ಚರಂಡಿಯ ವ್ಯವಸ್ಥೆಯಿಲ್ಲದೆ  ರೆಂಜಾಳ ಮಂಜೊಟ್ಟು  ಬಳಿಯಿಂದ ತೊಡಗಿ ಉದ್ದಕ್ಕೂ  ಮಳೆ ನೀರು ಪೂರ್ತಿಯಾಗಿ ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ರಸ್ತೆ ಪೂರ್ತಿ ಕೆಟ್ಟು ಹೋಗಿರುವುದಲ್ಲದೆ ಸಮೀಪದ ಮನೆಗಳ ಬಾವಿ ಮತ್ತು ತೋಟಗಳಿಗೆ ಮಳೆ ನೀರು ನುಗ್ಗುತ್ತಿದೆ. ಪರಿಸ್ಥಿತಿ ತೀರಾ ಹದಗೆಟ್ಟಿದ್ದರೂ ರೆಂಜಾಳ ಪಂಚಾಯತ್‌ ಮಾತ್ರ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಸಾರ್ವಜನಿಕರು  ಆರೋಪಿಸುತ್ತಿದ್ದಾರೆ. ಜಿಲ್ಲಾ ಪಂಚಾಯತ್‌ ರಸ್ತೆ ಬದಿಯ ತೋಡು ಹೂಳು, ಕಸಕಡ್ಡಿಯಿಂದ ಮುಚ್ಚಿ ಹೋಗಿದೆ. ಬಾಟ್ಲಿ , ಪ್ಲಾಸ್ಟಿಕ್‌ ತ್ಯಾಜ್ಯಗಳಿಂದ ತುಂಬಿ ಹೋಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಕಳೆದ ಐದು ವರ್ಷಗಳಿಂದ ಆಡಳಿತದಲ್ಲಿರುವ ಪಂಚಾಯತ್‌ ಕನಿಷ್ಠ ತೋಡನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದರೆ ಸಮಸ್ಯೆ ಇಷ್ಟು ಬಿಗಡಾಯಿಸುತ್ತಿರಲಿಲ್ಲ.

ಸಾರ್ವಜನಿಕರು ಸಾಕಷ್ಟು ಬಾರಿ ಪಂಚಾಯತ್‌ ಗಮನಕ್ಕೆ ಈ ಸಮಸ್ಯೆಯನ್ನು ತಂದರೂ ಸಂಬಂಧಪಟ್ಟವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಈ ಸಲದ ಮಳೆಗೆ ಮಂಜೊಟ್ಟು ಬಳಿಯಿಂದ ನೆಲ್ಲಿಕಾರು ತನಕದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಡಾಮರೀಕರಣವಾದ ಎರಡು  ಕಿ.ಮೀ. ರಸ್ತೆ ಮಾತ್ರ ಸುಸ್ಥಿಯಲ್ಲಿದೆ.

 

a href="#" target="_blank">







































error: Content is protected !!
Scroll to Top