ಈ ಸಲ ವಿಟ್ಲಪಿಂಡಿಗೆ ಜನರೂ ಇಲ್ಲ; ವೇಷವೂ ಇಲ್ಲ

ಉಡುಪಿ, ಸೆ.7: ಕೃಷ್ಣಮಠದಲ್ಲಿ ಸೆ. 10 ಮತ್ತು 11ರಂದು ನಡೆಯುವ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವದಲ್ಲಿ ಸಾರ್ವಜನಿಕರು ಭಾಗವಹಿಸುವುದನ್ನು ಜಿಲ್ಲಾಧಿಕಾರಿಯವರು ನಿರ್ಬಂಧಿಸಿದ್ದಾರೆ. ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಸಾರ್ವಜನಿಕರು ವಿಟ್ಲಪಿಂಡಿಯಲ್ಲಿ ಭಾಗವಹಿಸಿವಂತಿಲ್ಲ ಎಂದು  ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಕೊರೊನಾ  ಸಂಬಂಧಿಸಿ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಹೊಸ ಮಾರ್ಗಸೂಚಿಯಲ್ಲಿ ಸೆ. 21ರ ಬಳಿಕ 100 ಜನರು ಸೇರಿ ಕಾರ್ಯಕ್ರಮ ನಡೆಸಬಹುದು ಎಂದು ಆದೇಶಿಸಿದೆ. ಆದರೆ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಉತ್ಸವ ಸೆ. 10 ಹಾಗೂ 11ರಂದು ನಡೆಯುವುದರಿಂದ ಹಳೆಯ ಮಾರ್ಗಸೂಚಿಯೇ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೃಷ್ಣ ಜನ್ಮಾಷ್ಟಮಿ ಮಠದೊಳಗೆ ಸಾಂಪ್ರದಾಯಿಕವಾಗಿ ನಡೆಯಲಿದೆ. ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿ ಉತ್ಸವದಲ್ಲೂ ಮಠದವರು ಮಾತ್ರ ಮೊಸರು ಕುಡಿಕೆಗಳನ್ನು ಒಡೆಯುತ್ತಾರೆ. ಆ ಸಂದರ್ಭದಲ್ಲಿ ಸಾರ್ವಜನಿಕರಿಗೆ ರಥಬೀದಿ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ ಎಂದು ಹೇಳಿದ್ದಾರೆ.

ವೇಷ ಇಲ್ಲ

ವಿಟ್ಲಪಿಂಡಿಯ ಅವಿಭಾಜ್ಯ ಅಂಗವಾಗಿರುವ ವೇಷಗಳಿಗೂ ಈ ಸಲ ಅನುಮತಿಯಿಲ್ಲ. ವಿಟ್ಲಪಿಂಡಿ ಉತ್ಸವದ ಪ್ರಯುಕ್ತ ಯಾರೂ ಕೂಡ ವೇಷಗಳನ್ನು ಧರಿಸುವಂತಿಲ್ಲ ಎಂದು ಡಿಸಿ ತಿಳಿಸಿದ್ದಾರೆ.



































































































error: Content is protected !!
Scroll to Top