ಹೆಬ್ರಿಯಲ್ಲಿ ಮೂಕ ಪ್ರಾಣಿಗಳ ಮೇಲೆ ಮೃಗೀಯ ವರ್ತನೆ : ಮಂಗಗಳನ್ನು ಕೊಂದು ಗೋಣಿಚೀಲದಲ್ಲಿ ಕಟ್ಟಿತಂದು ಎಸೆದು ಹೋದ ಅಪರಿಚಿತರು

ಹೆಬ್ರಿ, ಸೆ.7: ಮಂಗಗಳನ್ನು ಕೊಂದು ಗೋಣಿಚೀಲದಲ್ಲಿ ತುಂಬಿಸಿ ರಸ್ತೆ ಬದಿ ಎಸೆದು ಹೋದ ಘಟನೆ ಹೆಬ್ರಿ ಸಮೀಪ ನಾಡ್ಪಾಲಿನಲ್ಲಿ ಸಂಭವಿಸಿದೆ.

ಹೆಬ್ರಿ ನಾಡ್ಪಾಲು ಗ್ರಾಮದ ಕಂಡಿಕಲ್ಲು ಎಂಬಲ್ಲಿ ಈ ಹೀನಾಯ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಗಳು ಮಂಗಗಳನ್ನು ಕೊಂದು ಗೋಣಿಚೀಲದಲ್ಲಿ ಕಟ್ಟಿ ತಂದು ರಸ್ತೆ ಬದಿ ಎಸೆದು ಹೋಗಿದ್ದಾರೆ. ಎಸೆದ ರಭಸಕ್ಕೆ ಕೆಲವು ಮಂಗಗಳ ಮೃತದೇಹಗಳು ಗೋಣಿಚೀಲದಿಂದ ಹೊರಬಿದ್ದಿವೆ. ಒಂದು ತಾಯಿ ಮಂಗ ಮರಿಯನ್ನು ಅಪ್ಪಿಕೊಂಡೇ ಸಾವನ್ನಪ್ಪಿದ ದೃಶ್ಯ ಹೃದಯ ಹಿಂಡುವಂತಿತ್ತು. ಅರಣ್ಯಾಧಿಕಾರಿಗಳು ಮತ್ತು ಪಶು ವೈದ್ಯರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.



































































































error: Content is protected !!
Scroll to Top