ಕಾರ್ಕಳ : ಪುರಸಭಾ ವ್ಯಾಪ್ತಿಯ ಪೆರ್ವಾಜೆ ಫಸ್ಟ್ ಕ್ರಾಸ್ ನಿವಾಸಿ ಪ್ರಶಾಂತಿ (58) ಎಂಬುವವರು ನೀರು ಸೇದುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ಸೆ. 5ರಂದು ಬೆಳಿಗ್ಗೆ ಸಂಭವಿಸಿದ್ದು, ಅಗ್ನಿ ಶಾಮಕ ದಳದ ತುರ್ತು ಕಾರ್ಯಾಚರಣೆಯಿಂದ ಮಹಿಳೆಯನ್ನು ರಕ್ಷಿಸಲಾಗಿದೆ. ಮಹಿಳೆಯನ್ನು ರಕ್ಷಿಸುವಲ್ಲಿ ಸ್ಥಳೀಯ ನಿವಾಸಿಗಳು, ಅಗ್ನಿ ಶಾಮಕ ದಳದ ಠಾಣಾಧಿಕಾರಿ ಬಿ.ಎಂ. ಸಂಜೀವ, ದಫೇದಾರ್ ಉದಯ ಕುಮಾರ್, ರೂಪೇಶ್, ಕಲ್ಲಪ್ಪ, ಮನೋಹರ್ ಪ್ರಸಾದ್, ಶಿವಯ್ಯ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.
ಕಾರ್ಕಳ : ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಮಹಿಳೆ


































































