ಕಾರ್ಕಳ : ಶಿಕ್ಷಕರು ಗಡಿಯಾರ ನೋಡಿಕೊಂಡು ಕೆಲಸ ಮಾಡಿದರೆ ಅದು ಕರ್ತವ್ಯವಾದರೆ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಅದು ಸೇವೆಯಾಗುವುದು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ವಿಠ್ಠಲ ಶೆಟ್ಟಿ ಬೇಲಾಡಿ ಅಭಿಪ್ರಾಯಪಟ್ಟರು.
ಅವರು ಸೆ. 3ರಂದು ಕಾರ್ಕಳ ರೋಟರಿ ಆನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆಯ ಪೂರ್ವ ಭಾವಿಯಾಗಿ ಹಮ್ಮಿಕೊಂಡ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮ್ಮಾನ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ವಿಠ್ಠಲ ಶೆಟ್ಟಿ ಬೇಲಾಡಿ, ಜಾರ್ಜ್ ಕ್ಯಾಸ್ತಲಿನೋ, ಕೆ. ಲಕ್ಷ್ಮೀಕಾಂತ್ ಭಟ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಿರಿಯ ರೋಟರಿಯನ್ ಸ್ವರ್ಣ ತುಕಾರಾಂ ನಾಯಕ್ ಸನ್ಮಾನಿಸಿದರು. ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಅಭಿನಂದನಾ ಭಾಷಣಗೈದರು. ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಇಕ್ಬಾಲ್ ಅಹಮ್ಮದ್ ಉಪಸ್ಥಿತರಿದ್ದರು. ಶಿಕ್ಷಕ ರಾಜೇಂದ್ರ ಭಟ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆನ್ಸ್ ಕಾರ್ಯದರ್ಶಿ ಸುಮಾ ನಾಯಕ್ ವಂದಿಸಿದರು.


































































