ಇನ್ನೂ ನಂದಿಲ್ಲ ತೈಲ ಟ್ಯಾಂಕರ್‌ಗೆ ಹತ್ತಿಕೊಂಡ ಬೆಂಕಿ

ದಿಲ್ಲಿ, ಸೆ. 4: ಭಾರತಕ್ಕೆ ಕಚ್ಚಾತೈಲ ತರುತ್ತಿದ್ದ ಹಡಗಿಗೆ ಶ್ರೀಲಂಕಾ ಕರಾವಳಿ ಸಮೀಪ ಬೆಂಕಿಹತ್ತಿಕೊಂಡಿರುವ ಘಟನೆಯಲ್ಲಿ ಓರ್ವ ಸಿಬಂದಿ ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ.

ಹಡಗಿನಲ್ಲಿ ಈಗಲೂ ಬೆಂಕಿ ಧಗಧಗಿಸುತ್ತಿದ್ದು,ಭಾರತೀಯ ನೌಕಾಪಡೆ ಶ್ರೀಲಂಕಾ ನೌಕಾಪಡೆಯ ಜೊತೆ ಸೇರಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿರುವ ಸಿಬಂದಿ ಫಿಲಿಪ್ಪೈನ್‌  ದೇಶದವರು. ಕುವೈಟ್‌ ನಿಂದ ಭಾರತೀಯ ತೈಲ ನಿಗಮಕ್ಕಾಗಿ ಕಚ್ಚಾತೈಲ ತರುತ್ತಿದ್ದ ನ್ಯೂ ಡೈಮಂಡ್‌ ಎಂಬ ಹಡಗಿಗೆ ಗುರುವಾರ ಬೆಂಕಿ ಹತ್ತಿಕೊಂಡಿದೆ. ಹಡಗಿನಲ್ಲಿ 2 ದಶಲಕ್ಷ ಬ್ಯಾರಲ್‌ ಕಚ್ಚಾತೈಲ ಇರುವುದರಿಂದ ತೀವ್ರ ಆತಂಕದ ಪರಿಸ್ಥಿತಿ ಎದುರಾಗಿದೆ. ಬೆಂಕಿ ಹತ್ತಿಕೊಳ್ಳುವ ವೇಳೆ ಕ್ಯಾಪ್ಟನ್‌ ಸೇರಿ 23 ಸಿಬಂದಿಗಳಿದ್ದರು. ಎಂಜಿನ್‌ ರೂಮ್‌ ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಹಡಗಿಗೆ ಹಬ್ಬಿದೆ. ಒಬ್ಬನನ್ನು ಹೊರತುಪಡಿಸಿ ಉಳಿದ ಸಿಬಂದಿಗಳನ್ನು ಪಾರು ಮಾಡಲಾಗಿದೆ.











































error: Content is protected !!
Scroll to Top